ADVERTISEMENT

ಕಾಸರಗೋಡು | ಕ್ಷಯರೋಗ ತಜ್ಞ ಡಾ.ಬಿ.ಎಸ್.ರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 18:31 IST
Last Updated 25 ಜುಲೈ 2025, 18:31 IST
ಡಾ.ಬಿ.ಎಸ್.ರಾವ್
ಡಾ.ಬಿ.ಎಸ್.ರಾವ್   

ಕಾಸರಗೋಡು: ನಗರದ ವೈದ್ಯ, ಕೆ.ಪಿ.ಆರ್.ರಾವ್ ರಸ್ತೆಯ ನಿವಾಸಿ ಡಾ.ಬಿ.ಎಸ್. ರಾವ್ (ಬಾಯಾರು ಶಂಕರನಾರಾಯಣ ರಾವ್) ಶುಕ್ರವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. 

ಅವರಿಗೆ ಪತ್ನಿ ಪದ್ಮಾವತಿ ರಾವ್, ಮಕ್ಕಳಾದ ಡಾ.ಶಿವಪ್ರಸಾದ್ ರಾವ್, ಡಾ.ರೇಖಾ ಮಯ್ಯ, ರೂಪಾ ರಾವ್ ಇದ್ದಾರೆ.

ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದ ಅವರು ನಂತರ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾದ ಕಾಸರಗೋಡು ನರ್ಸಿಂಗ್ ಹೋಂ 1980ರಲ್ಲಿ ಆತ್ಮೀಯರ ಜೊತೆ ಸೇರಿ ಸ್ಥಾಪಿಸಿದ್ದರು.

ADVERTISEMENT

ವೈದ್ಯ ವೃತ್ತಿಯ ಜೊತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವರು ಸಕ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.