ADVERTISEMENT

ಮಂಗಳೂರು: ಕೆ.ಸಿ. ವೇಣುಗೋಪಾಲ್- ಸಿಎಂ ಸಿದ್ದರಾಮಯ್ಯ ಮಾತುಕತೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 8:06 IST
Last Updated 3 ಡಿಸೆಂಬರ್ 2025, 8:06 IST
   

ಮಂಗಳೂರು: ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಸ್ತಾಂತರದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಮಾತುಕತೆ ಕುತೂಹಲ ಕೆರಳಿಸಿದೆ.

‘ರಾಜಕೀಯ ಶಾಶ್ವತ ಅಲ್ಲ, ಅಪ್ಪನ ಆಸ್ತಿಯೂ ಅಲ್ಲ’

ADVERTISEMENT

‘ರಾಜಕೀಯ ಶಾಶ್ವತ ಅಲ್ಲ. ನಮ್ಮಪ್ಪನ ಆಸ್ತಿಯೂ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ‘ಅಸ್ಪಷ್ಟ’ ಮಾತುಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಮಂತ್ರಣದ ಮೇರೆಗೆ, ಅವರ ಮನೆಗೆ ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಹೋಗಿದ್ದರು. ಅಲ್ಲಿ ಶಿವಕುಮಾರ್ ಜತೆಗೆ ಉಪಾಹಾರ ಸೇವಿಸಿದ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದಿದ್ದರು. ಅಲ್ಲಿಂದ ಹೊರಡುವಾಗ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮದ್ದೂರು ಶಾಸಕ ಉದಯ ಕದಲೂರು ಅವರಿಗೆ ಎದುರಾದರು. ಈ ವೇಳೆ, ಗೋಪಾಲಕೃಷ್ಣ ಅವರು ಸಿದ್ದರಾಮಯ್ಯ ಅವರನ್ನು ಮಾತಿಗೆ ಎಳೆದರು. ಅಗ ನಗುತ್ತಲೇ ಮಾತನಾಡಿದ ಸಿದ್ದರಾಮಯ್ಯ ಅವರು, ‘ಏನು ಆಗುತ್ತದೆಯೋ ಆಗಲಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅಲ್ಲಿಂದ ನಡೆದರು.

ಇಬ್ಬರ ನಡುವಣ ಈ ಮಾತುಕತೆಯ ದೃಶ್ಯದಲ್ಲಿ ಧ್ವನಿ ಸ್ಪಷ್ಟವಾಗಿಲ್ಲ. ಗೋಪಾಲಕೃಷ್ಣ ಅವರು ಕೇಳಿದ ಪ್ರಶ್ನೆ ಯಾವುದು ಎಂಬುದು ಕೇಳದಿದ್ದರೂ ಸಿದ್ದರಾಮಯ್ಯ ಅವರು, ‘ರಾಜಕೀಯ ಶಾಶ್ವತ ಅಲ್ಲ’ ಎಂಬುದು ಮಾತ್ರ ಗಟ್ಟಿಯಾಗಿ ಕೇಳುತ್ತದೆ.