ADVERTISEMENT

ಕುಕ್ಕೆ ಸುಬ್ರಹ್ಮಣ್ಯ: 122 ಸಿಬ್ಬಂದಿಗೆ ಕಾಯಮಾತಿ ಪತ್ರ

ಆದೇಶ ಪತ್ರ ಹಸ್ತಾಂತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 2:52 IST
Last Updated 20 ಅಕ್ಟೋಬರ್ 2021, 2:52 IST
ಕುಕ್ಕೆ ದೇವಳದ ನೌಕರರಿಗೆ ಖಾಯಂಮಾತಿ ಪತ್ರವನ್ನು ಸಚಿವ ಎಸ್.ಅಂಗಾರ ಹಸ್ತಾಂತರಿಸಿದರು. ಸಂಸದ ನಳೀನ್ ಕುಮಾರ್ ಕಟೀಲ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಗುಂಡಡ್ಕ ಇದ್ದರು.
ಕುಕ್ಕೆ ದೇವಳದ ನೌಕರರಿಗೆ ಖಾಯಂಮಾತಿ ಪತ್ರವನ್ನು ಸಚಿವ ಎಸ್.ಅಂಗಾರ ಹಸ್ತಾಂತರಿಸಿದರು. ಸಂಸದ ನಳೀನ್ ಕುಮಾರ್ ಕಟೀಲ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಗುಂಡಡ್ಕ ಇದ್ದರು.   

ಸುಬ್ರಹ್ಮಣ್ಯ: ‘ಕುಕ್ಕೆ ದೇವಳದಲ್ಲಿ ಹಲವು ವರ್ಷಗಳಿಂದ ಸಂಚಿತ, ಕಾರ್ಯಕರ್ತ ಮತ್ತು ವೋಚರ್ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ 122 ಸಿಬ್ಬಂದಿಗೆ ಕಾಯಮಾತಿ ಆದೇಶ ಪತ್ರ ಲಭಿಸಿದೆ.

‘ಸರ್ಕಾರವು ಸಿಬ್ಬಂದಿ ಮಾದರಿಗೆ ಅನುಮೋದನೆ ನೀಡಿದೆ. ಮಾದರಿ ಅನುಮೋದನೆಗೊಳ್ಳದ ಕಾರಣ, ವೇತನ ಶ್ರೇಣಿ ನಿಗದಿಪಡಿಸಿ, ಸೇವಾ ಭದ್ರತೆ ನೀಡಿ ಕಾಯಮಾತಿ ಮಾಡಲು ತೊಡಕಾಗಿತ್ತು. ಈಗ ಈ ತೊಡಕು ನಿವಾರಣೆ ಆಗಿದೆ. ಸಿಬ್ಬಂದಿ ಕೆಲಸಕ್ಕೆ ಸರ್ಕಾರ ಭದ್ರತೆ ಒದಗಿಸಿದೆ’ ಎಂದು ಆದೇಶ ಪತ್ರವನ್ನು ಹಸ್ತಾಂತರಿಸಿದ ಸಚಿವ ಎಸ್‌. ಅಂಗಾರ ಅಭಿಪ್ರಾಯಪಟ್ಟರು.

ಸಂಸದ ನಳೀನ್ ಕುಮಾರ್ ಕಟೀಲ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಗುಂಡಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾ ಅಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ್ ನಲ್ಲೂರಾಯ, ಚಂದ್ರಶೇಖರ್ ಮರ್ಧಾಳ, ಕಿಶೋರ್ ಕುಮಾರ್ ಕೂಜುಗೋಡು, ಕೆ.ಎಸ್.ಎಸ್.ಕಾಲೇಜಿನ ಪ್ರಾಂಶುಪಾಲ ಡಾ.ಗೋವಿಂದ ಎನ್.ಎಸ್, ಎಸ್.ಎಸ್.ಪಿ.ಯು.ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.