ADVERTISEMENT

ಕುಕ್ಕೆ: 17 ಲಕ್ಷದ ಚಿನ್ನಾಭರಣ ತುಂಬಿದ್ದ ಭಕ್ತರ ಬ್ಯಾಗ್ ಕಳವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 15:18 IST
Last Updated 22 ಜುಲೈ 2021, 15:18 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಹೋಟೆಲ್ ಒಂದರಲ್ಲಿ ಭಕ್ತರ ಬೆಲೆಬಾಳುವ ಸೊತ್ತುಗಳಿದ್ದ ಚೀಲವನ್ನು ಕಳ್ಳ ಎಗರಿಸಿದ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿಗಳಾದ ಗಂಗಮ್ಮ ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ಬಂದು ಹೋಟೆಲ್‌ನಲ್ಲಿ ಲಿ ತಿಂಡಿ ತಿನ್ನುತ್ತಿರುವ ವೇಳೆ ಕಳವು ನಡೆದಿದೆ. ಗಂಗಮ್ಮ ಅವರು ಟೇಬಲ್ ಪಕ್ಕದಲ್ಲಿ ತಮ್ಮಲ್ಲಿದ್ದ ಬ್ಯಾಗನ್ನು ಇರಿಸಿದ್ದಾರೆ. ತಿಂಡಿ ತಿಂದ ಬಳಿಕ ನೋಡಿದಾಗ ಬ್ಯಾಗ್‌ ಇರಲಿಲ್ಲ. ಆ ಬ್ಯಾಗ್‌ನಲ್ಲಿ 17 ಲಕ್ಷ ಬೆಳೆಬಾಳುವ 493 ಗ್ರಾ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳ್ಳ ಬ್ಯಾಗನ್ನು ಎಗರಿಸಿ ಪರಾರಿಯಾಗುವ ದೃಶ್ಯ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT