ADVERTISEMENT

ಕುಕ್ಕೆ: ನೂತನ ಬೆಳ್ಳಿಪಲ್ಲಕಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 4:33 IST
Last Updated 18 ಡಿಸೆಂಬರ್ 2024, 4:33 IST
ನೂತನ ಬೆಳ್ಳಿ ಪಲ್ಲಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದೀಪಾರಾಧನೆಯುಕ್ತ ಉತ್ಸವ ನಡೆಯಿತು
ನೂತನ ಬೆಳ್ಳಿ ಪಲ್ಲಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದೀಪಾರಾಧನೆಯುಕ್ತ ಉತ್ಸವ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ ಕುಟುಂಬಸ್ಥರು ಸೇವಾರೂಪದಲ್ಲಿ ನೀಡಿದ ನೂತನ ಬೆಳ್ಳಿಪಲ್ಲಕಿಯನ್ನು ದೇವರಿಗೆ ಸಮರ್ಪಿಸಲಾಯಿತು.

ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರ ಉಪಸ್ಥಿತಿಯಲ್ಲಿ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ವೈದಿಕ ವಿಧಿ– ವಿಧಾನ ನೆರವೇರಿಸಿದರು.

ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಚಿನ್ಮಯಿ ಕೊಚ್ಚಿ ಮತ್ತು ಕುಟುಂಬಸ್ಥರು ಪಾಲಕಿ ಉತ್ಸವಕ್ಕೆ ಸಂಕಲ್ಪ ನೆರವೇರಿಸಿದರು.

ADVERTISEMENT

ಕುಕ್ಕೆ ಸುಬ್ರಹ್ಮಣ್ಯ ದೇವರ ದೀಪಾರಾಧನೆಯುಕ್ತ ನೂತನ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು. ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ಹೊರಾಂಗಣದಲ್ಲಿ ನಡೆಯಿತು. ಅರ್ಚಕ ರಾಮಕೃಷ್ಣ ನೂರಿತ್ತಾಯ ಅವರು ಉತ್ಸವದ ವಿಧಿವಿಧಾನ ನೆರವೇರಿಸಿದರು.

ಸುಮಾರು ₹ 17.65 ಲಕ್ಷ ವೆಚ್ಚ, 18 ಕೆ.ಜಿ ಬೆಳ್ಳಿಯಲ್ಲಿ ನಿರ್ಮಿಸಿದ ಪಲ್ಲಕಿಯ ಸಮರ್ಪಣಾ ಸೇವೆ ನೆರವೇರಿಸಿದ ಸೇವಾರ್ಥಿಗಳಿಗೆ ಮಹಾಪ್ರಸಾದ ನೀಡಲಾಯಿತು.

ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ, ಶ್ರೀಕುಮಾರ್ ಬಿಲದ್ವಾರ, ಚಿನ್ಮಯಿ ಕೊಚ್ಚಿ, ಶ್ರೀನಿಧಿ, ಯಧುನಂದನ ಗಲಗಲಿ, ಸುಮಂತ್, ರಾಘವ್, ಸುಧನ್ವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.