ADVERTISEMENT

ಕುಕ್ಕೆಯಲ್ಲಿ ದೀಪಾವಳಿ: ಹೊರಾಂಗಣ ಉತ್ಸವಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 10:58 IST
Last Updated 30 ಅಕ್ಟೋಬರ್ 2019, 10:58 IST
 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಯಶಸ್ವಿಗೆ ಗಜಲಕ್ಷ್ಮಿ ಪೂಜೆ ಮಂಗಳವಾರ ರಾತ್ರಿ ನಡೆಯಿತು
 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಯಶಸ್ವಿಗೆ ಗಜಲಕ್ಷ್ಮಿ ಪೂಜೆ ಮಂಗಳವಾರ ರಾತ್ರಿ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೀಪಾವಳಿ ಆಚರಣೆ ನಡೆಯಿತು. ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಗೋಪೂಜೆ, ಗಜಲಕ್ಷ್ಮಿ ಪೂಜೆ ನಡೆಯಿತು. ಇದರೊಂದಿಗೆ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳಿಗೆ ಚಾಲನೆ ಸಿಕ್ಕಿದೆ.

ಅರ್ಚಕರು ದೇಗುಲದ ಆನೆ ‘ಯಶಸ್ವಿ’ಗೆ ಆರತಿ ಬೆಳಗಿ, ಪ್ರಸಾದ ನೀಡಿದರು. ದೇಗುಲದಲ್ಲಿ ವಿಶೇಷ ಪ್ರಾರ್ಥನೆ, ಧನಲಕ್ಷ್ಮಿ, ಗೋಪೂಜೆಗಳು ನಡೆದವು.ದೀಪಾವಳಿ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.ದೇಗುಲದ ಕಾರ್ಯನಿರ್ವಹಣಾಧಿಕಾರಿಯಾದ ಪುತ್ತೂರು ತಹಶೀಲ್ದಾರ್ ಅನಂತಕೃಷ್ಣ, ಸಹಾಯಕ ಕಾರ್ಯನಿವರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್, ದೇಗುಲದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಚಾರ ಅಧಿಕಾರಿ ಗೋಪಿನಾಥ ನಂಭೀಶ, ದೇಗುಲದ ಸಿಬ್ಬಂದಿಗಳು, ಮಾವುತರು, ಭಕ್ತರು ಉಪಸ್ಥಿತರಿದ್ದರು.

ದೇವರ ಮೂರ್ತಿ ಹೊರಾಂಗಣ ಪ್ರವೇಶಿಸುವ ಮೂಲಕ ಹೊರಾಂಗಣದ ಉತ್ಸವಗಳು ರಾತ್ರಿ ನಡೆದವು. ಪ್ರಾರ್ಥನೆ ಹಾಗೂ ಮಹಾಪೂಜೆ ,ಪಲ್ಲಕಿ ಮತ್ತು ಬಂಡಿ ಉತ್ಸವಗಳು ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಭಕ್ತಿ ಶ್ರದ್ಧೆಯಿಂದ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.