ಮೂಲ್ಕಿ: ‘ನಮ್ಮ ಸಂಸ್ಕೃತಿಯು ಜನಪದ ಕ್ಷೇತ್ರದಿಂದ ಬೆಳೆದಿದೆ. ಇದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಿ ಅವರಲ್ಲಿ ಜನಪದ ಸಂಸ್ಕೃತಿಯನ್ನು ಅರಳಿಸುವ ಕೆಲಸ ಮಾಡಬೇಕು’ ಎಂದು ಕಿನ್ನಿಗೋಳಿ ಯುಗಪುರುಷರದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ದ. ಕ. ಜಿಲ್ಲಾ ತಾಲ್ಲೂಕು ಘಟಕ ಮೂಡಬಿದಿರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಮತ್ತು ವಾಯ್ಸ್ ಆಫ್ ಆರಾಧನಾ ಬಳಗದಿಂದ ನಡೆದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದ್ಮಶ್ರೀ ಭಟ್ ಅಧ್ಯಕ್ಷತೆ ವಹಿಸಿದ್ದರು. ತುಳುವರ್ಲ್ಡ್‌ನ ರಾಜೇಶ್ ಆಳ್ವ ಬದಿಯಡ್ಕ ಮಾತನಾಡಿ, ‘ಆಧುನಿಕ ಕಾಲಘಟ್ಟದಲ್ಲಿ ಜಾನಪದ ಆಚರಣೆಗಳು, ಹಬ್ಬದ ಸಂಪ್ರದಾಯಗಳು ಮರೆಯಾಗುತ್ತಿದ್ದು ಅದನ್ನು ಮುಂದಿನ ತಲೆಮಾರಿಗೆ ಉಳಿಸಿ– ಬೆಳೆಸುವ ಕಾರ್ಯ ಮಾಡಬೇಕಾಗಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ರಾಜೇಶ್ ಭಟ್ ಮಂದಾರ, ರಾಜೇಶ್ ಸ್ಕೈಲಾರ್ಕ್, ಚಂದ್ರಹಾಸ ದೇವಾಡಿಗ, ಅಭಿಷೇಕ ಶೆಟ್ಟಿ ಐಕಳ, ರಾಮಕೃಷ್ಣ ಶಿರೂರು, ಸದಾನಂದ ನಾರಾವಿ, ಬಸವರಾಜ ಮಂತ್ರಿ, ದೀನ್‌ರಾಜ್ ಕೆ., ಸಂಭ್ರಮ ಮತ್ತಿತರರು ಇದ್ದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು. ವಾಯ್ಸ್ ಆಫ್ ಆರಾಧನಾ ಬಳಗದವರಿಂದ ಜಾನಪದ – ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.