ADVERTISEMENT

ಲಯನ್ಸ್ ಕ್ಲಬ್ ಮಂಗಳೂರು ಬ್ಯಾಂಕರ್ಸ್ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:21 IST
Last Updated 1 ಆಗಸ್ಟ್ 2021, 1:21 IST
ಮಂಗಳೂರಿನ ಲಯನ್ಸ್ ಕ್ಲಬ್ ಮಂಗಳೂರುವತಿಯಿಂದ ಬ್ಯಾಂಕರ್ಸ್ ದಿನಾಚರಣೆ ನಡೆಯಿತು.
ಮಂಗಳೂರಿನ ಲಯನ್ಸ್ ಕ್ಲಬ್ ಮಂಗಳೂರುವತಿಯಿಂದ ಬ್ಯಾಂಕರ್ಸ್ ದಿನಾಚರಣೆ ನಡೆಯಿತು.   

ಮಂಗಳೂರು: ‘ಬ್ಯಾಂಕಿಂಗ್ ಕ್ಷೇತ್ರ ಇಂದು ಸೂಪರ್ ಮಾರ್ಕೆಟ್ ಆಗಿದೆ. ವಿಮೆ ಇತ್ಯಾದಿಗಳನ್ನೂ ಮಾರಾಟ ಮಾಡುತ್ತಿದ್ದೇವೆ. ದಿನಸಿ ಮಾರಾಟ ಮಾಡುವ ದಿನವೂ ಬರಬಹುದು’ ಎಂದು ಗೌರವ ಅತಿಥಿ ಬ್ಯಾಂಕ್ ಆಫ್ ಬರೋಡಾದ ಜಿಎಂ, ವಲಯ ಮುಖ್ಯಸ್ಥೆ ಗಾಯತ್ರಿ ರವಿಚಂದ್ರನ್ ಹೇಳಿದರು.

ನಗರದ ಲಯನ್ಸ್ ಕ್ಲಬ್ ಮಂಗಳೂರು ಆಯೋಜಿಸಿದ್ದ ಬ್ಯಾಂಕರ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ವಲಯ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಖಾಸಗಿಯಿಂದ ಅಂದು ರಾಷ್ಟ್ರೀಕರಣ, ಈಗ ವಿಲೀನ ಮತ್ತು ಖಾಸಗೀಕರಣ ಆಗುತ್ತಿದೆ. ಗ್ರಾಹಕರು ಮನೆಯಲ್ಲಿಯೇ ಇದ್ದು ವ್ಯವಹರಿಸಲು ಡಿಜಿಟಲ್ ಬ್ಯಾಂಕಿಂಗ್ ವಿಧಾನವನ್ನೂ ಪರಿಚಯಿಸಲಾಗಿದೆ’ ಎಂದು ಕೆನರಾ ಬ್ಯಾಂಕ್ಜಿಎಂ ಮಂಗಳೂರು ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ ಹೇಳಿದರು.

ADVERTISEMENT

ಐಒಬಿ ಮಾಜಿ ಸಿಎಂಡಿ ಎಂ. ನರೇಂದ್ರ ಬ್ಯಾಂಕರ್‌ಗಳನ್ನು ಗೌರವಿಸಿದರು. ಕ್ಲಬ್‌ನ ಸದಸ್ಯರಾಗಿರುವ 45 ಬ್ಯಾಂಕರ್‌ಗಳನ್ನು ಗೌರವಿಸಲಾಯಿತು. ನಗರದ ಮೊದಲ ಲಯನ್ಸ್ ಕ್ಲಬ್ ಇದಾಗಿದ್ದು 63 ವರ್ಷಗಳ ಇತಿಹಾಸ ಹೊಂದಿದೆ, ಅಗತ್ಯ ಇರುವವರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಕ್ಲಬ್ ಅಧ್ಯಕ್ಷ ಬಿ. ಸತೀಶ್ ರೈ ಹೇಳಿದರು. ಕೆ ಸಿ. ಹೆಗ್ಡೆ, ಡೆನಿಸ್ ರಾಡ್ರಿಗಸ್ ಮತ್ತು ಸುಧಾಕರ ಶೆಟ್ಟಿ ಎಂ., ಪ್ರಕಾಶ್ ಭಂಡಾರಿ, ಪಿ. ವಿ. ರೈ , ನೀನೆಟ್ ಟೆಲ್ಲಿಸ್ , ಮಾಜಿ ಜಿಲ್ಲಾ ರಾಜ್ಯಪಾಲ ಅರುಣ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತಾ ಶೆಟ್ಟಿ, ಮಾರ್ಗದರ್ಶಕ ಗೋವರ್ಧನ್ ಶೆಟ್ಟಿ, ಪ್ರದೀಪ್ ನಾಯ್ಕ್, ರಾಮಕೃಷ್ಣ ಕೋ–ಆಪರೇಟಿವ್ ಬ್ಯಾಂಕ ಅಧ್ಯಕ್ಷ ಜಯರಾಜ್ ರೈ, ಪ್ರಾಂತ್ಯ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ವಲಯಾಧ್ಯಕ್ಷ ಶೇಖರ ಪೂಜಾರಿ , ನಿನ್ನೆಟ್ ರೊಡ್ರಿಗಸ್, ನ್ಯಾನ್ಸಿ ಮಸ್ಕರೇನ್ಹಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.