ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:07 IST
Last Updated 9 ಡಿಸೆಂಬರ್ 2018, 13:07 IST
ಬದಿಯಡ್ಕ ಸಮೀಪದ ನೀರ್ಚಾಲು ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್‌ ಮಾತನಾಡಿದರು.
ಬದಿಯಡ್ಕ ಸಮೀಪದ ನೀರ್ಚಾಲು ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್‌ ಮಾತನಾಡಿದರು.   

ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಗಡಿನಾಡ ಘಟಕದ ಆಶ್ರಯದಲ್ಲಿ 12ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು 2019 ಜನವರಿ 19 ಹಾಗೂ 20ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಸ್ವಾಗತ ಸಮಿತಿ ರಚನಾ ಸಭೆಯು ಶುಕ್ರವಾರ ನೀರ್ಚಾಲು ಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ಘಟಕದ ಅಧ್ಯಕ್ಷ ಎಸ್ ವಿ ಭಟ್ ಮಾತನಾಡಿ,' ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಾಂಸ್ಕೃತಿಕ ಸಿರಿವಂತಿಕೆ ಹಾಗೂ ಭಾಷೆಯ ರಕ್ಷಣೆಗೆ ಕನ್ನಡಿಗರು ಬದ್ಧರಾಗಿದ್ದು, ಕನ್ನಡಿಗರ ಸಂಘಟನೆಯೇ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಈ ಸಮಾವೇಶದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ' ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ನೀಚಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ,'ನೀರ್ಚಾಲು ಶಾಲೆಯು ಹುಟ್ಟಿನಿಂದಲೇ ಕನ್ನಡದ ಒಟ್ಟಿಗೆ ಇರುವಂತಹುದು. ಕನ್ನಡದ ಹಬ್ಬಕ್ಕೆ ಸಂಪೂರ್ಣ ಸಹಕಾರ ನೀಡುತ್ತಾ, ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಕೋರಲಾಗುವುದು' ಎಂದು ಹೇಳಿದರು.

ADVERTISEMENT

ನೀರ್ಚಾಲು ಶಾಲಾ ಪ್ರಾಂಶುಪಾಲ ಶಿವಪ್ರಸಾದ್ ಎಂ ಕೆ, ಶಾಲಾ ಮುಖ್ಯ ಶಿಕ್ಷಕ ವೆಂಕಟ್ರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಮುಖಂಡರಾದ ಬಿ. ಬಾಲಕೃಷ್ಣ ಅಗ್ಗಿತ್ತಾಯ, ಶಿವರಾಮ ಭಟ್ ಕಾರಿಂಜಹಳೆಮನೆ, ಥೋಮಸ್ ಡಿಸೋಜಾ, ಉಷಾ ಶಿವರಾಮ ಭಟ್, ವಿಜಯಾ ಸುಬ್ರಹ್ಮಣ್ಯ, ಡಾ. ಬೇ ಸಿ ಗೋಪಾಲಕೃಷ್ಣ ಭಟ್, ಪ್ರದೀಪ್ ಕುಮಾರ್, ಸುಧೀರ್ ಕುಮಾರ ರೈ, ಬಾಲ ಮಧುರಕಾನನ, ವಿರಾಜ್ ಅಡೂರು, ಪುರುಷೋತ್ತಮ ಭಟ್ ಪುದುಕೋಳಿ, ವಿ ಬಿ ಕುಳಮರ್ವ, ಗೋವಿಂದ ಶರ್ಮ ಕೋರಿಕ್ಕಾರು, ಗೋವಿಂದ ಭಟ್ ಬಳ್ಳಮೂಲೆ ಮೊದಲಾದವರು ಭಾಗವಹಿಸಿದ್ದರು.

ಧರ್ಮತ್ತಡ್ಕ ರಾಮಚಂದ್ರ ಭಟ್ ಸ್ವಾಗತಿಸಿದರು. ನವೀನ್ಚಂದ್ರ ಮಾಸ್ತರ್ ವಂದಿಸಿದರು. ಸುಬ್ಬಣ್ಣ ಶೆಟ್ಟಿ ನಿರೂಪಿಸಿದರು. ಸಮ್ಮೇಳನದ ಮುಂದಿನ ಸಿದ್ಧತಾ ಸಭೆಯ ಡಿ.18ರಂದು ಸಂಜೆ 4ಕ್ಕೆ ನೀರ್ಚಾಲು ಶಾಲೆಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.