ADVERTISEMENT

ಮಂಗಳೂರು: 14ನೇ ಮಹಡಿಯಿಂದ ಜಿಗಿದು ವೃದ್ಧೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 8:56 IST
Last Updated 10 ಜೂನ್ 2021, 8:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರು ಗುರುವಾರ ಅಪಾರ್ಟ್‌ಮೆಂಟ್‌ ನ 14ನೇಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಕುಲಶೇಖರ ಚೌಕಿ ಎಂಬಲ್ಲಿನ ನಿವಾಸಿ ಪುಷ್ಪಲತಾ (64) ಮೃತರು.

ಕುಲಶೇಖರ ಚೌಕಿಯಲ್ಲಿರುವ ಬಹುಮಹಡಿಗಳ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಜಿಗಿದಿದ್ದರು.

ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು, ಮೊದಲೊಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.