ADVERTISEMENT

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್‌ಲೈನ್

₹ 6.76 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 5:02 IST
Last Updated 15 ಸೆಪ್ಟೆಂಬರ್ 2022, 5:02 IST

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಕೋಚಿಂಗ್ ಡಿಪೊದಲ್ಲಿ ಹೊಸ ಪಿಟ್‌ಲೈನ್ ಅನ್ನು ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯ ಬುಧವಾರ ಉದ್ಘಾಟಿಸಿದರು. ಹೊಸ ಫ್ಲಾಟ್‌ ಫಾರ್ಮ್ 4 ಮತ್ತು 5ರಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಪ್ರಧಾನ ಮುಖ್ಯ ಎಂಜಿನಿಯರ್ ದೇಶ್ ರತನ್ ಗುಪ್ತಾ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಗೌತಮ್ ದತ್ತಾ, ವಿಭಾಗೀಯ ರೈಲ್ವೆ ಮ್ಯಾನೇಜರ್ ತ್ರಿಲೋಕ್ ಕೊಠಾರಿ ಇದ್ದರು.

ಹೊಸ ಪಿಟ್‌ಲೈನ್‌ ಅನ್ನು ₹ 6.76 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೈಲ್ವೆ ನಿಲ್ದಾಣದ ಅಭಿವೃದ್ಧಿ ಯೋಜನೆಯ ಪ್ರಕಾರ ಹೊಸ ಪ್ಲಾಟ್‌ಫಾರ್ಮ್‌ಗಳನ್ನು (ನಂ.4 ಮತ್ತು 5) ನಿರ್ಮಿಸಲು ಅನುಕೂಲವಾಗುವಂತೆ ಈ ಹಿಂದೆ ಇದ್ದ 18 ಕೋಚ್‌ಗಳ ಪಿಟ್‌ಲೈನ್ ಬದಲಿಸಿ, 24 ಕೋಚ್‌ಗಳನ್ನು ಹಿಡಿದಿಟ್ಟುಕೊಳ್ಳಬಹುದಾದ ಹೊಸ ಪಿಟ್‌ಲೈನ್ ನಿರ್ಮಿಸಲಾಗಿದೆ.

ADVERTISEMENT

ಹಗಲು, ರಾತ್ರಿ ಸಮಯದಲ್ಲಿ ಕೋಚ್ ಕ್ಲೀನಿಂಗ್, ಕೋಚ್ ಚಾರ್ಜಿಂಗ್, ನೀರು ಹಾಕುವುದು ಸೇರಿದಂತೆ ಕೋಚ್‌ಗಳ ವಾಡಿಕೆಯ ನಿರ್ವಹಣೆ ಮತ್ತು ತಪಾಸಣೆಗೆ ಪಿಟ್ ಲೈನ್ ಅನುಕೂಲವಾಗುತ್ತದೆ. ಪಿಟ್‌ಲೈನ್‌ನ ಎರಡೂ ಬದಿಯಲ್ಲಿ 546 ಮೀಟರ್‌ಗಳ ಕ್ಯಾಟ್‌ವಾಕ್‌ಗಳು ರೇಕ್‌ನ ಪ್ರತಿ ಕೋಚ್‌ಗೆ ಸುಲಭ ಪ್ರವೇಶವನ್ನು ಒದಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.