ADVERTISEMENT

ಮಂಗಳೂರು: ವಿಕಾಸ್‌ ಕುಮಾರ್‌ ವಿಕಾಶ್‌ ನೂತನ ಪೊಲೀಸ್‌ ಕಮಿಷನರ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 5:18 IST
Last Updated 27 ಜೂನ್ 2020, 5:18 IST

ಮಂಗಳೂರು: ಐಪಿಎಸ್‌ ಅಧಿಕಾರಿ ಡಾ.ಪಿ.ಎಸ್‌.ಹರ್ಷ ಅವರನ್ನು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಯಿಂದ ವರ್ಗಾವಣೆ ಮಾಡಿದ್ದು, ನಕ್ಸಲ್‌ ನಿಗ್ರಹ ಪಡೆಯ ಡಿಐಜಿಯಾಗಿದ್ದ 2004ರ ಗುಂಪಿನ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಶ್‌ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ.

2004ರ ಗುಂಪಿನ ಐಪಿಎಸ್‌ ಅಧಿಕಾರಿಯಾದ ಹರ್ಷ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರು ಈ ಹಿಂದೆಯೂ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. 2019ರ ಆಗಸ್ಟ್‌ ಮೊದಲ ವಾರ್ ಹರ್ಷ ಅವರನ್ನು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಿಸಲಾಗಿತ್ತು. 11 ತಿಂಗಳಿಂದ ಅವರು ಈ ಹುದ್ದೆಯಲ್ಲಿದ್ದಾರೆ.

ಬಿಹಾರ ರಾಜ್ಯದವರಾದ ವಿಕಾಸ್‌ ಕುಮಾರ್‌ ವಿಕಾಶ್‌, 2004ರಿಂದ ರಾಜ್ಯದ ವಿವಿಧೆಡೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಸ್‌ಪಿಯಾಗಿದ್ದರು. ಒಂದು ವರ್ಷದಿಂದ ನಕ್ಸಲ್‌ ನಿಗ್ರಹ ಪಡೆಯ ಡಿಐಜಿ ಹುದ್ದೆಯಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.