ADVERTISEMENT

ಮಂಗಳೂರು: ಹಿಂಸಾತ್ಮಕವಾಗಿ ಜಾನುವಾರು ಸಾಗಣೆ– ಎರಡು ಜಾನುವಾರು ಸಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 9:37 IST
Last Updated 28 ಮಾರ್ಚ್ 2025, 9:37 IST
<div class="paragraphs"><p>ಜಾನುವಾರು (ಸಂಗ್ರಹ ಚಿತ್ರ)</p></div>

ಜಾನುವಾರು (ಸಂಗ್ರಹ ಚಿತ್ರ)

   

ಮಂಗಳೂರು: ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ತಿಳಿಸಿದ್ದಾರೆ.

ಮಿನಿ ಗೂಡ್ಸ್ ವಾಹನದಲ್ಲಿ ಜಾನುವಾರುಗಳ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ‌ ಮಾಹಿತಿ ಆಧಾರದಲ್ಲಿ ವಾಹನವನ್ನು ಬೆನ್ನತ್ತಿ ಸೂರಲ್ಪಾಡಿ ಮಸೀದಿ ಸಮೀಪ ವಶಕ್ಕೆ ಪಡೆಯಲಾಗಿದೆ. ವಾಹನದಲ್ಲಿ 15-20 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಣೆ ಮಾಡಲಾಗುತ್ತಿತ್ತು.‌ ವಧೆಯ ಉದ್ದೇಶಕ್ಕೆ ಇವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪಶುವೈದ್ಯರನ್ನು‌ ಕರೆಯಿಸಿ ಜಾನುವಾರುಗಳ ತಪಾಸಣೆ‌ ಮಾಡಿಸಿದಾಗ ಎರಡು ಜಾನುವಾರುಗಳು ಗಾಯಗೊಂಡು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ತೌಸಿಫ್ ಪೆರಾಡಿ ಮತ್ತು ಹೆರೈನ್ ಪೆರಾಡಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಇನ್ನೊಬ್ಬ ಆರೋಪಿಯ ಪತ್ತೆ ಕಾರ್ಯ‌ ಮುಂದುವರಿದಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.