ನರಸಿಂಹರಾಜಪುರ: ತಾಲ್ಲೂಕಿನ ಮೆಣಸೂರು ಗ್ರಾಮದ ವ್ಯಾಪ್ತಿಯಲ್ಲಿ ಶಿವಮೊಗ್ಗಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಅಳವಡಿಸಿದ್ದ ಹಂಪ್‌ಗೆ ಬಣ್ಣ ಬಳಿಯಲಾಗಿದೆ.
ಮೂರು ಕಡೆ ಹಂಪ್ ಅನ್ನು ಅಳವಡಿಸಲಾಗಿದ್ದು, ಹಂಪ್‌ಗೆ ಬಳಿದಿದ್ದ ಬಣ್ಣ ಮಾಸಿತ್ತು. ಇದರಿಂದ ವೇಗವಾಗಿ ಬರುವ ವಾಹನಗಳಿಗೆ ಹಂಪ್ ಇರುವುದು ತಕ್ಷಣಕ್ಕೆ ಗೊತ್ತಾಗುತ್ತಿರಲಿಲ್ಲ. ಇದರಿಂದ ಅಪಘಾತವಾಗುವ ಸಂಭವವಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಮೇ 1ರ ಸಂಚಿಕೆಯ ಕುಂದು ಕೊರತೆ ವಿಭಾಗದಲ್ಲಿ ವರದಿ ಪ್ರಕಟವಾಗಿತ್ತು. ಗುರುವಾರವೇ ರಸ್ತೆಯ ಹಂಪ್‌ಗೆ ಸಂಬಂಧಪಟ್ಟ ಇಲಾಖೆ ಬಣ್ಣ ಬಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.