ADVERTISEMENT

‘ಪ್ರಕೃತಿ, ಸಂಸ್ಕಾರ ಭಾರತದ ವೈಶಿಷ್ಟ್ಯ’

​ಪ್ರಜಾವಾಣಿ ವಾರ್ತೆ
Published 18 ಮೇ 2025, 13:16 IST
Last Updated 18 ಮೇ 2025, 13:16 IST
ಮೂಲ್ಕಿ ಬಳಿಯ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರ ಸಮಾರೋಪ ನಡೆಯಿತು
ಮೂಲ್ಕಿ ಬಳಿಯ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರ ಸಮಾರೋಪ ನಡೆಯಿತು   

ಮೂಲ್ಕಿ: ಭಾರತ ದೇಶವು ಪ್ರತಿ ನೂರು ಕಿ.ಮೀ.ಗೆ ತನ್ನ ಪ್ರಕೃತಿ ಮತ್ತು ಸಂಸ್ಕಾರವನ್ನು ಬದಲಿಸುತ್ತದೆ. ಇದೇ ನಮ್ಮ ವೈಶಿಷ್ಟ್ಯವಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು ಧಾರ್ಮಿಕ ವಿದ್ವಾಂಸ ರವೀಂದ್ರ ಭಟ್ ಅತ್ತೂರು ಹೇಳಿದರು.

ಮೂಲ್ಕಿ ಬಳಿಯ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಿನ್ನಿಗೋಳಿ ಬ್ರಾಹ್ಮಣ ಸಮಾಜ ಟ್ರಸ್ಟ್ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಬಾಗಿತ್ವದಲ್ಲಿ ನಡೆದ 15 ದಿನಗಳ ಸಂಸ್ಕಾರ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ವಿದ್ವಾನ್ ಅಂಗಡಿಮಾರ್ ವಿಶ್ವೇಶ ಭಟ್ ಮಾತನಾಡಿದರು.

ADVERTISEMENT

ಶಿಬಿರಾರ್ಥಿಗಳಾದ ಮನಿರತ್ನ, ಆರಾಧ್ಯ, ಶಾರ್ವಣಿ, ಕಾರ್ತಿಕ್ ಮೊದಲಾದವರು ಹಾಡು, ಭಜನೆ, ವಿಷ್ಣು ಸಹಸ್ರ ನಾಮವನ್ನು ಪ್ರಸ್ತು‌ತಿಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಪಾರ್ಥಸಾರಥಿ ಪಂಜ, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಸದಸ್ಯ ಕೊರಿಯಾರ್ ಸುಬ್ರಹ್ಮಣ್ಯ ಪ್ರಸಾದ್, ಜ್ಯೋತಿಷಿ ವಿಶ್ವನಾಥ್ ಭಟ್, ಕೋಡು ಶ್ರೀನಿವಾಸ್ ಭಟ್, ದೇವಿಕಾ ರಾವ್ ಪಡುಬಿದ್ರಿ, ರಘುರಾಮ್ ಭಟ್, ಸುಧೀಂದ್ರ ಉಡುಪ ಬೈಲು, ಸುರಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರವಿಂದ ಭಟ್ ಕುದುಕೊಳ್ಳಿ, ಡಾ.ಗುರುರಾಜ ಉಡುಪ ಕಿಲೆಂಜೂರು, ಸುರೇಶ್ ರಾಜ್ ಭಟ್, ಕೋಡು, ಭರತ್ ರಾವ್ ಪಕ್ಷಿಕೆರೆ, ಸುಧೀಂದ್ರ ಉಡುಪ ಮಾಡ ಭಾಗವಹಿಸಿದ್ದರು. ವೈಭವ್ ಭಟ್ ಉರ್ಮಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.