ADVERTISEMENT

‘ಎನ್‌ಐಎ ಕ್ರಮ ಅಭಿನಂದನೀಯ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 6:09 IST
Last Updated 24 ಸೆಪ್ಟೆಂಬರ್ 2022, 6:09 IST
ಸುದರ್ಶನ್ ಎಂ.
ಸುದರ್ಶನ್ ಎಂ.   

ಮಂಗಳೂರು: ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿರುವ ಪಿಎಫ್‌ಐ ಸಂಘಟನೆ ಯನ್ನು ಮಟ್ಟ ಹಾಕಲು ಪ್ರಾಮಾ ಣಿಕ ಕಾರ್ಯ ಮಾಡುತ್ತಿರುವ ಎನ್.ಐ.ಎ. ಯನ್ನು ಬಿಜೆಪಿ ಅಭಿನಂದಿಸುತ್ತದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ಹೇಳಿದ್ದಾರೆ.

ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕೆಂದು ಕನಸು ಕಾಣುತ್ತಿರುವ ಪಿಎಫ್‌ಐ ಸಂಘಟನೆಯ ನಿಜ ಬಣ್ಣ ಬಯಲಾಗುತ್ತಿದೆ. ದೇಶ– ವಿದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರ ಜತೆ ಪಿಎಫ್‌ಐ ಕಾರ್ಯಕರ್ತರು ನೇರ ಸಂಪರ್ಕದಲ್ಲಿರುವುದು ತನಿಖೆಯಿಂದ ಬಯಲಾಗಿದೆ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿದ್ದು, ಪಿಎಫ್‌ಐ ಅದರ ಇನ್ನೊಂದು ಮುಖ ಎಂದು ಮೇಲ್ನೋಟಕ್ಕೆ ಕಂಡಬರುತ್ತಿದೆ. ಹಿಂದುತ್ವ ಕಾರ್ಯಕರ್ತರನ್ನು ಹತ್ಯೆ ಮಾಡಿ ಭಯದ ವಾತಾವರಣ ಮೂಡಿಸಲು ಯತ್ನಿಸುತ್ತಿರುವ ಪಿಎಫ್‌ಐ ಮೇಲೆ ಎನ್‌ಐಎ ಮೂಲಕ ಕಾನೂನು ಕ್ರಮ ಕೈಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖರನ್ನು ಪತ್ರಿಕಾ ಹೇಳಿಕೆಯಲ್ಲಿ ಅವರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT