ADVERTISEMENT

ಪೊಲೀಸರಿಗೆ ರಾತ್ರಿಯೂ ಊಟ

ಕಮಿಷನರೇಟ್‌ ವ್ಯಾಪ್ತಿಯ ಸಿಬ್ಬಂದಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:00 IST
Last Updated 29 ಏಪ್ರಿಲ್ 2021, 5:00 IST
ರಾತ್ರಿ ಊಟದ ವ್ಯವಸ್ಥೆಗೆ ಕಮಿಷನರ್‌ ಶಶಿಕುಮಾರ್ ಚಾಲನೆ ನೀಡಿದರು.
ರಾತ್ರಿ ಊಟದ ವ್ಯವಸ್ಥೆಗೆ ಕಮಿಷನರ್‌ ಶಶಿಕುಮಾರ್ ಚಾಲನೆ ನೀಡಿದರು.   

ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಕಮಿಷನರ್‌ ಕಚೇರಿ ಆವರಣದಲ್ಲಿ ಇಸ್ಕಾನ್ ಕುಡುಪು ಕಟ್ಟೆ ವತಿಯಿಂದ ಪ್ರತಿ ದಿನ ಸಂಜೆ 6ರಿಂದ ರಾತ್ರಿ 8ರವರೆಗೆ ರಾತ್ರಿ ಊಟದ ವ್ಯವಸ್ಥೆ ಆರಂಭಿಸಲಾಗಿದೆ.

ಬುಧವಾರ ರಾತ್ರಿ ಊಟದ ವ್ಯವಸ್ಥೆಗೆ ಚಾಲನೆ ನೀಡಿದ ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್, ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಇಸ್ಕಾನ್ ಕುಡುಪು ಕಟ್ಟೆ ವತಿಯಿಂದ ಮಾಡಿರುವುದು ಶ್ಲಾಘನೀಯ ಎಂದರು.

ಕಳೆದ ಲಾಕ್‌ಡೌನ್ ಅವಧಿಯಲ್ಲೂ ನಗರದ ಹಲವು ಕಡೆ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡಿದ್ದೇವೆ. ಈ ಬಾರಿ ಪ್ರಥಮವಾಗಿ ಪೊಲೀಸ್ ಇಲಾಖೆಗೆ ನೀಡುವ ಮೂಲಕ ಆರಂಭಿಸಿಸಲಾಗಿದೆ ಎಂದು ಇಸ್ಕಾನ್ ಕುಡುಪು ಕಟ್ಟೆಯ ಡಾ.ಸುತಾಪದಾಸ್ ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಇಸ್ಕಾನ್‌ನ ಲಕ್ಷ್ಮಣ್‌ದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.