ADVERTISEMENT

ಮಂಗಳೂರು: ಬೋಸ್ಕೋಸ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:06 IST
Last Updated 17 ಜೂನ್ 2022, 16:06 IST
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಬೋಸ್ಕೊ ಮಾತನಾಡಿದರು
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಬೋಸ್ಕೊ ಮಾತನಾಡಿದರು   

ಮಂಗಳೂರು: ನಗರದ ದೇರೆಬೈಲ್‍ನಲ್ಲಿರುವ ಬೋಸ್ಕೋಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪೋಷಕರ ಓರಿಯೆಂಟೇಷನ್ ಕಾರ್ಯಕ್ರಮ ಈಚೆಗೆ ನಡೆಯಿತು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಬೋಸ್ಕೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಶಿಸು, ನೈತಿಕ
ಮೌಲ್ಯಗಳು, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕಠಿಣ ಪರಿಶ್ರಮಪಟ್ಟರೆ ಗುರಿ ತಲುಪಲು ಸಾಧ್ಯ’ ಎಂದರು. ಪ್ರಾಂಶುಪಾಲೆ ವಿಜಯ ಕುಮಾರಿ ಕಾಲೇಜಿನ ಮಾಹಿತಿ ನೀಡಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅನಿಲ್ ಮಸ್ಕರೇನ್ಹಸ್‌ ಮಾತನಾಡಿ, ‘ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಹೆತ್ತವರ ಮತ್ತು ಉಪನ್ಯಾಸಕರ ಪಾತ್ರ ಅಮೂಲ್ಯ’ ಎಂದರು.

ADVERTISEMENT

ಉಪಪ್ರಾಂಶುಪಾಲ ರಾಜ್‍ಕಿರಣ್ ಕಾಲೇಜಿನ ವಾರ್ಷಿಕ ಯೋಜನೆ, ನೀಟ್, ಜೆಇಇ, ಸಿಇಟಿ ಪರೀಕ್ಷೆಗಳ ಮಾಹಿತಿ ನೀಡಿದರು. ಆಂಗ್ಲ ಭಾಷಾ ಉಪನ್ಯಾಸಕಿ ದಿವ್ಯಮಹೇಶ್ ಶೆಟ್ಟಿ ಸ್ವಾಗತಿಸಿದರು. ಸ್ಮಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.