ADVERTISEMENT

ಬೆಂಗಳೂರು ಚಲೊ 28ಕ್ಕೆ: ಬಿ.ಕೆ.ಅಣ್ಣಪ್ಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 8:33 IST
Last Updated 26 ನವೆಂಬರ್ 2022, 8:33 IST

ಮಂಗಳೂರು: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಗೆ ಒಳಪಡಿಸುವಂತೆ ಒತ್ತಾಯಿಸಿ ಇದೇ 28ರಂದು ಬೆಂಗಳೂರು ಚಲೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನಗರ ಸ್ಥಳಿಯ ಸಂಸ್ಥೆಗಳಿಂದ 200 ಮಂದಿ ಭಾಗವಹಿಸಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಹೊರಗುತ್ತಿಗೆ ನೌಕರರು ಜುಲೈ ತಿಂಗಳಲ್ಲಿ ಪ್ರತಿಭಟನೆ ಮಾಡಿದಾಗ, ಎಲ್ಲ ಹೊರಗುತ್ತಿಗೆ ನೌಕರರನನ್ನು ನೇರವೇತನ ಪಾವತಿ ವ್ಯವಸ್ಥೆಗೆ ಒಳಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಇನ್ನೂ ಈಡೇರಿಸಿಲ್ಲ. ನೀರು ಸರಬರಾಜು ಸಹಾಯಕರನ್ನು ಡೇಟಾ ಆಪರೇಟರ್‌ಗಳನ್ನು ನೇರಪಾವತಿಗೆ ಒಳಪಡಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಗುತ್ತಿಗೆ ಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಿದರೆ ಶೇ 18ರಷ್ಟು ಜಿಎಸ್‌ಟಿ ಹಾಗೂ ಗುತ್ತಿಗೆ ಏಜೆನ್ಸಿಗೆ ನೀಡುವ ಶೇ 5ರಷ್ಟು ಕಮಿಷನ್‌ ಮೊತ್ತ ಉಳಿತಾಯ ಆಗಲಿದೆ’ ಎಂದರು.

‘ಮಂಗಳೂರು ಸಫಾಯಿ ಕರ್ಮಾಚಾರಿಗಳ ಸಂಘದ ನಾರಾಯಣ ಶೆಟ್ಟಿ, ‘ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ 8OO ಪೌರಕಾರ್ಮಿಕರಲ್ಲಿ ಕೇವಲ 210 ಮಂದಿಗೆ ಮಾತ್ರ ನೇರಪಾವತಿ ವ್ಯವಸ್ಥೆಗೆ ತರಲಾಗಿದೆ. ಉಳಿದವರಿಗೂ ಈ ಸವಲತ್ತು ಸಿಗಬೇಕು‌’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.