ADVERTISEMENT

ಸುಳ್ಯ: ಪ್ರವೀಣ್ ನೆಟ್ಟಾರು ಆರಂಭಿಸಿದ್ದ ಕೋಳಿ ಅಂಗಡಿ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:25 IST
Last Updated 4 ಸೆಪ್ಟೆಂಬರ್ 2022, 5:25 IST
ಪ್ರವೀಣ್‌ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ನಡೆಸುತ್ತಿದ್ದ ಅಕ್ಷಯ ಫಾರ್ಮ್‌ ಫ್ರೆಶ್‌ ಚಿಕನ್‌ ಮಳಿಗೆ ಪುನರಾರಂಭಗೊಂಡಿದೆ
ಪ್ರವೀಣ್‌ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ನಡೆಸುತ್ತಿದ್ದ ಅಕ್ಷಯ ಫಾರ್ಮ್‌ ಫ್ರೆಶ್‌ ಚಿಕನ್‌ ಮಳಿಗೆ ಪುನರಾರಂಭಗೊಂಡಿದೆ   

ಸುಳ್ಯ (ದಕ್ಷಿಣ ಕನ್ನಡ): ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ನಡೆಸುತ್ತಿದ್ದ ‘ಅಕ್ಷಯ ಫಾರ್ಮ್‌ ಫ್ರೆಶ್‌ ಚಿಕನ್‌’ ಕೋಳಿ ಮಾಂಸ ಮಾರಾಟ ಮಳಿಗೆಶುಕ್ರವಾರದಿಂದ ಮತ್ತೆ ಆರಂಭವಾಗಿದೆ.

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಈ ಮಳಿಗೆ ಪ್ರವೀಣ್‌ ಅವರ ಹತ್ಯೆಯ ಬಳಿಕ ಮುಚ್ಚಿತ್ತು. ಅವರ ಕುಟುಂಬಸ್ಥರು ಈ ಮಳಿಗೆಯನ್ನು ಮುಂದುವರಿಸಲು ಉತ್ಸಾಹ ತೋರಿರಲಿಲ್ಲ. ಸ್ಥಳೀಯ ಯುವಕ ಯತೀಶ್ ಮುರ್ಕೆತ್ತಿ ಅವರು ಸದ್ಯ ಈ ಮಳಿಗೆಯನ್ನು ನಡೆಸುತ್ತಿದ್ದಾರೆ.

‘ಹಲಾಲ್ ಮಾಂಸ ಮಾರಾಟ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ನಡೆಸಿದ್ದ ಅಭಿಯಾನದಲ್ಲಿ ಪ್ರವೀಣ್‌ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಿಂದೂ ಯುವಕರು ಮಾಂಸ ಮಾರಾಟದಲ್ಲಿ ತೊಡಗುವುದನ್ನು ಉತ್ತೇಜಿಸಲು ಅವರು ಸ್ವತಃ ಕೋಳಿ ಮಾಂಸ ಮಾರಾಟದ ಅಂಗಡಿಯನ್ನು ವರ್ಷದ ಹಿಂದೆ ಆರಂಭಿಸಿದ್ದರು. ಮುಸ್ಲಿಂ ವ್ಯಾಪಾರಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಪ್ರವೀಣ್‌ ಆರಂಭಿಸಿದ್ದ ಕೋಳಿ ಮಾಂಸದ ಅಂಗಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಅವರ ಕುಟುಂಬಸ್ಥರು ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.