ಪುತ್ತೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಕ್ಲಸ್ಟರ್ ವತಿಯಿಂದ ಮಹಾವೀರ ಸಭಾಂಗಣದಲ್ಲಿ ಕೃಷಿ ಅಭಿವೃದ್ಧಿ ಜನಸಂಪರ್ಕ ಶಿಬಿರ ಆಯೋಜಿಸಲಾಗಿತ್ತು.
ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ವಿ. ಪಾಟೀಲ ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್‌ನಿಂದ ರೈತರಿಗೆ, ಸ್ವಸಹಾಯ ಸಂಘಳಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಟಿ.ಜಿ. ಚೆಲುವ ರಂಗಪ್ಪ ಅವರು ಕೃಷಿ ಇಲಾಖೆಯಿಂದ ಕೃಷಿ, ಕೃಷಿಯೇತರ ಚಟುವಟಿಕೆಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಅವರು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಎನ್‌ಆರ‌್ಎಲ್‌ಎಂ ಸಂಜೀವಿನಿ ತಾಲ್ಲೂಕು ಘಟಕದ ವ್ಯವಸ್ಥಾಪಕ ಜಗತ್ ಕೆ. ಅವರು, ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಯೂನಿಯನ್ ಬ್ಯಾಂಕ್‌ನಿಂದ ಸಿಗುವ ಸಾಲ ಸೌಲಭ್ಯ, ಬಡ್ಡಿ ರಿಯಾಯಿತಿ ಬಗ್ಗೆ ತಿಳಿಸಿದರು.
ರೈತರು, ಸ್ವಸಹಾಯ ಸಂಘಗಳಿಗೆ ₹9 ಕೋಟಿ ಅಧಿಕ ಮೊತ್ತದ ಸಾಲ ವಿತರಿಸಲಾಯಿತು. ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ದಿನೇಶ್ ಎಚ್.ಕೆ, ಕೃಷಿಕ ಸುರೇಶ್ ಬಲ್ನಾಡು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.