ADVERTISEMENT

ಕುಕ್ಕೆ: ರಾಮನಾಥಜೀ ಮಹಾರಾಜ್ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:32 IST
Last Updated 11 ಫೆಬ್ರುವರಿ 2025, 14:32 IST
ಕುಕ್ಕೆ ದೇವಳಕ್ಕೆ ರಾಮನಾಥಜೀ ಮಹಾರಾಜ್ ಭೇಟಿ ನೀಡಿದರು
ಕುಕ್ಕೆ ದೇವಳಕ್ಕೆ ರಾಮನಾಥಜೀ ಮಹಾರಾಜ್ ಭೇಟಿ ನೀಡಿದರು   

ಸುಬ್ರಹ್ಮಣ್ಯ: ಮಧ್ಯಪ್ರದೇಶದ ಉಜ್ಜಯಿನಿಯ ಅಖಿಲ ಭಾರತೀಯ ನಾಥ ಸಂಪ್ರದಾಯ ಭ್ರಾತೃಹರಿ ಗುಹಾದ ಮಠಾಧೀಶ ಯೋಗಿ ಪೀರ್‌ ರಾಮನಾಥಜೀ ಮಹಾರಾಜ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಯೋಗಿ ಅವರನ್ನು ಸ್ವಾಗತಿಸಿದರು.

ದೇವರ ದರ್ಶನ ಮಾಡಿದ ಅವರಿಗೆ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ದೇವರ ಮಹಾಪ್ರಸಾದ ನೀಡಿದರು. ಹೊಸಳಿಗಮ್ಮನ ದರ್ಶನ ಮಾಡಿದರು.

ADVERTISEMENT

ಸಂದೀಪ್ ಗುರೂಜಿ, ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಭಕ್ತರಾದ ಲತೀಶ್ ಗುಂಡ್ಯ, ಶ್ರೀಕುಮಾರ್ ಬಿಲದ್ವಾರ, ಮನ್ಮಥ್ ಬಟ್ಟೋಡಿ, ಪ್ರವೀಣ್ ಸಿದ್ಧಾಪುರ, ವಿಜು ಉತ್ತಪ್ಪ, ಶರತ್ ಪೂಜಾರಿ, ಸುದೀಪ್ ನೆಲ್ಯಾಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.