ಕಾಸರಗೋಡು: ಮೂಲ್ಕಿ ಕೊಳ್ನಾಡು ನಿವಾಸಿ ಮೊಹಮ್ಮದ್ ಷರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಆಟೋಚಾಲಕರಾಗಿದ್ದ ಮಹಮ್ಮದ್ ಷರೀಫ್ ಅವರು ನಿತ್ಯವೂ ಮಂಗಳೂರಿನ ಕೊಟ್ಟಾರದ ಆಟೊ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದರು. ಬುಧವಾರ ಮನೆಯಿಮದ ಹೊರಟಿದ್ದ ಅವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಕುಟುಂಬದವರು ಮೂಲ್ಕಿ ಠಾಣೆಗೆ ದೂರು ನೀಡಿದ್ದರು.
ಷರೀಫ್ ಅವರ ಮೃತದೇ ಕುಂಜತ್ತೂರು ಅಡ್ಕ ಪಳ್ಳ ಎಂಬಲ್ಲಿನ ಖಾಸಗಿ ಹಿತ್ತಿಲ ಬಾವಿಯಲ್ಲಿ ಏ.10 ರಂದು ಪತ್ತೆಯಾಗಿತ್ತು. ಶವದ ಮೈಮೇಲೆ ಮಾರಕಾಯುಧದಿಂದ ಥಳಿಸಿದ ಗಾಯಗಳು ಪತ್ತೆಯಾಗಿದ್ದುವು. ಬಾವಿಯ ಸಮೀಪದಲ್ಲೇ ಇವರ ಆಟೊರಿಕ್ಷಾ ಕೂಡ ಸಿಕ್ಕಿತ್ತು.
ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯು ಸುರತ್ಕಲ್ ಸಮೀಪದ ಕಾಟಿಪಳ್ಳದವನು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.