ADVERTISEMENT

ಗೋವಾದಲ್ಲಿ ಶಂಖನಾದ ಮಹೋತ್ಸವ 17ರಿಂದ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:02 IST
Last Updated 12 ಮೇ 2025, 13:02 IST
ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ಮಾತನಾಡಿದರು   

ಮಂಗಳೂರು: ಸನಾತನ ಸಂಸ್ಥೆಯ ಸಂಸ್ಥಾಪಕ ಜಯಂತ ಬಾಳಾಜಿ ಆಠವಲೆ ಅವರ 83ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಗೋವಾದ ಪೋಂಡಾದ ಗೋವಾ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಮೇ 17ರಿಂದ 19ರ ವರೆಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂತರು, ಹಿಂದುತ್ವ ರಕ್ಷಕರು, ಕೇಂದ್ರ ಸಚಿವರು, ಸಾಧಕರು ಭಾಗವಹಿಸಲಿದ್ದಾರೆ. ಆರ್ಟ್ ಆಫ್ ಲಿವಿಂಗ್‌ ಶ್ರೀ ಶ್ರೀ ರವಿಶಂಕರ ಗುರೂಜಿ, ಬಾಬಾ ರಾಮದೇವ ಭಾಗವಹಿಸಲಿದ್ದಾರೆ. ಮೇ 19ರಂದು ವಿಶ್ವ ಕಲ್ಯಾಣಕ್ಕಾಗಿ ಹಾಗೂ ಸನಾತನ ಧರ್ಮದವರ ಆರೋಗ್ಯಕ್ಕಾಗಿ ಮಹಾಧನ್ವಂತರಿ ಯಜ್ಞ ನಡೆಯಲಿದೆ ಎಂದರು.

ಈಶ್ವರ ಕೊಟ್ಟಾರಿ, ವಿಜಯ ಕುಮಾರ್, ಎಂ.ಜೆ. ಶೆಟ್ಟಿ, ಕಿರಣ್ ರೈ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.