ADVERTISEMENT

ಅ.22ರಂದು ಸಾಂಸ್ಕೃತಿಕ ಕಲಾಮೇಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 10:18 IST
Last Updated 20 ಅಕ್ಟೋಬರ್ 2018, 10:18 IST

ಸುಬ್ರಹ್ಮಣ್ಯ: ದಾಸನಿವಾಸ ಕಲಾವೇದಿಕೆ ಸುಬ್ರಹ್ಮಣ್ಯ ಮತ್ತು ಸ್ಥಳೀಯ ಕಲಾಸಕ್ತರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಕುಲ್ಕುಂದದ ದಾಸನಿವಾಸ ಕಲಾವೇದಿಕೆಯಲ್ಲಿ ಇದೇ 22ರಂದು ಸಾಂಸ್ಕೃತಿಕ ಕಲಾಮೇಳ ನಡೆಯಲಿದೆ.

‘ಅಂದು ಸಂಜೆ 4.30ಕ್ಕೆ ಯುವ ಕಲಾಭಾರತಿ ಪುರಸ್ಕೃತ ವಿದ್ವಾನ್ ಅಭಿಲಾಶ್ ಗಿರಿಪ್ರಸಾದ್ ಚೆನೈ ಇವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ನೆರವೇರಲಿದೆ. ಇವರಿಗೆ ವಿದ್ವಾನ್ ಸುಮಂತ್ ಮಂಜುನಾಥ್(ವಯಲಿನ್), ವಿದ್ವಾನ್ ನಿಕ್ಷಿತ್ ಪುತ್ತೂರು( ಮೃದಂಗಂ) ಹಿಮ್ಮೇಳ ಸಹಕಾರ ನೀಡಲಿದ್ದಾರೆ’ ಎಂದು ವೇದಿಕೆ ಸಂಚಾಲಕ ಕಲಾವಿದ ಯಜ್ಞೇಶ್ ಆಚಾರ್ ತಿಳಿಸಿದ್ದಾರೆ.

‘ರಾತ್ರಿ 7ರಿಂದ ನಡೆಯುವ ಚಿಂತನ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಕುಮಟದ ಯಾಜಿ ಮಿತ್ರ ಮಂಡಳಿಯಿಂದ ರಾಜಾ ರುದ್ರಕೋಪ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿದ್ವಾನ್ ರಾಮಕೃಷ್ಣ ಹೆಗಡೆ ಹಿಲ್ಲೂರು, ಕೊಳಗಿ ಕೇಶವ ಹೆಗಡೆ(ಭಾಗವತಿಕೆ), ಪರಮೇಶ್ವರ ಭಂಡಾರಿ(ಚೆಂಡೆ), ರಾಮ ಭಂಡಾರಿ(ಮದ್ದಳೆ) ಹಿಮ್ಮೇಳ ಸಹಕಾರ ನೀಡಲಿದ್ದಾರೆ. ಬಳ್ಕೂರು ಕೃಷ್ಣ ಯಾಜಿ(ರಕ್ತಚಂದನ), ಕಾರ್ತಿಕ್ ಚಿಟ್ಟಾಣಿ(ರುದ್ರಸೇನ), ನೀಲ್ಗೋಡ್ ಶಂಕರ ಹೆಗಡೆ(ಚಿತ್ರಾಕ್ಷಿ), ಶ್ರೀಧರ ಕಾಸರಗೋಡು(ಹಾಸ್ಯ), ಪುರಂದರ ಮೂಡ್ಕಣಿ(ರಕ್ತಕೇಳಿ), ಷಣ್ಮುಖ ಗೌಡ(ಸತ್ಯಶೀಲೆ), ಅಭಿಷೇಕ ಅಡಿ(ಜಯಸೇನ) ಹಿಮ್ಮೇಳದಲ್ಲಿ ಪಾತ್ರಧಾರಿಗಳಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.