ADVERTISEMENT

ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್‌ ಮಾಡುವಾಗ ಮಂಗಳೂರಿನ ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 13:19 IST
Last Updated 11 ಏಪ್ರಿಲ್ 2023, 13:19 IST
ಓಷಿನ್‌ ಪಿರೇರ
ಓಷಿನ್‌ ಪಿರೇರ   

ಮಂಗಳೂರು: ನಗರದ ಯುವತಿಯೊಬ್ಬರು ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್‌ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರನ್ನು ನಗರದ ಗೋರಿಗುಡ್ಡೆ ನಿವಾಸಿ ಓಷಿನ್‌ ಪಿರೇರ (28) ಎಂದು ಗುರುತಿಸಲಾಗಿದೆ. ಗೋರಿಗುಡ್ಡೆ ‘ಹಿಲ್‌ ಸ್ಟೀಕ್‌’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿದ್ದ ಓಷಿನ್‌ ಪಿರೇರ ಅವರು ಒಲಿವಿಯಾ ಪಿರೇರ- ದಿ. ಆಸ್ಕರ ಮಾರ್ಟಿನ್‌ ಪಿರೇರ ದಂಪತಿಯ ಮಗಳು.

ರಜೆ ಕಳೆಯಲು ಎರಡು ದಿನಗಳ ಹಿಂದಷ್ಟೇ ಅವರು ಥಾಯ್ಲೆಂಡ್‌ಗೆ ತೆರಳಿದ್ದರು. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ತಾಯಿ ಒಲಿವಿಯಾ ಪಿರೇರ ಅವರು ಬಂಧುಗಳ ಜೊತೆ ಮಂಗಳವಾರ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದರು.

ADVERTISEMENT

ನಗರದ ಸೇಂಟ್‌ ಆಗ್ನೆಸ್‌ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್‌ ಕಂಪನಿ’ ರೆಸ್ಟೋರಂಟ್‌ ಒಡತಿಯಾಗಿದ್ದ ಅವರು ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.