ಉಜಿರೆ (ದಕ್ಷಿಣ ಕನ್ನಡ): ಲಂಡನ್‍ನ ನ್ಯಾಷನಲ್ ಕ್ವಾಲಿಟಿ ಅಶ್ಶೂರೆನ್ಸ್ (ಎನ್‍ಕ್ಯೂಎ) ಸಂಸ್ಥೆಯು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ (ಎಸ್‌ಕೆಡಿಆರ್‌ಡಿಪಿ) 2024ರಲ್ಲಿ ನೀಡಿದ್ದ ಐಎಸ್‌ಒ ಪ್ರಮಾಣಪತ್ರವನ್ನು ಈಗ ‘ಐಎಸ್‌ಒ 27001–2022’ ಆಗಿ ಮೇಲ್ದರ್ಜೆಗೆ ಏರಿಸಿದೆ.
ಸಂಸ್ಥೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಬದ್ಧತೆ, ಬ್ಯಾಂಕ್ ಮೂಲಕ ನಡೆಸುವ ವ್ಯವಹಾರಗಳ ದಾಖಲಾತಿ ನಿರ್ವಹಣೆ ಮೊದಲಾದ 109 ಅಂಶಗಳನ್ನು ಗಮನಿಸಿ ಪ್ರಮಾಣಪತ್ರವನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಜಿ.ಎಸ್. ಭಾರ್ಗವ್ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿ ಸಿದರು. ಭಾರತದಲ್ಲಿ ಐಎಸ್‌ಒ 27001–2022 ಪ್ರಮಾಣಪತ್ರ ಪಡೆದ ಚಾರಿಟಬಲ್ ಟ್ರಸ್ಟ್‌ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲ ಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.