ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಯಂತ್ರಡ್ಕ ಎಂಬಲ್ಲಿನ ಮನೆಗೆ ನುಗ್ಗಿದ ಕಳ್ಳರು ಸುಮಾರು ₹ 1.28 ಲಕ್ಷ ಮೌಲ್ಯದ ನಗ ನಗದನ್ನು ಕಳವು ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಂತ್ರಡ್ಕದ ಅಬೂಬಕ್ಕರ್ ಸಿದ್ದಿಕ್ ಎಂಬುವರು ತನ್ನ ಮನೆಯವರೊಂದಿಗೆ ಮೂಡುಬಿದಿರೆಯ ಸಂಬಂಧಿಕರ ಮದುವೆಗೆಂದು ಹೋಗಿದ್ದರು. ಅವರು ವಾಪಸಾದಾಗ ಮನೆಯ ಕಪಾಟು ತೆರೆದುಕೊಂಡಿತ್ತು. ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ₹ 58 ಸಾವಿರ ನಗದು, ₹ 70 ಸಾವಿರ ಮೌಲ್ಯದ 2 ಪವನ್ ಚಿನ್ನಾಭರಣಳು ಕಳವಾಗಿದ್ದವು. ಚಾವಣಿಯ ಹೆಂಚು ತೆಗೆದು ಕಳ್ಳರು ಒಳನುಗ್ಗಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕಳವು ಪ್ರಕರಣ:
ಕೆಲ ಸಮಯಗಳಿಂದ ಹಲವೆಡೆ ಕಳವು ಪ್ರಕರಣ ನಡೆಯುತ್ತಿದ್ದು, ಜನ ಆತಂಕದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೆಕ್ಕಿಲಾಡಿಯ 4 ಮನೆಗಳಲ್ಲಿ ಸರಣಿ ಕಳವು ನಡೆದಿತ್ತು. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ನಿಗಾ ಇರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.