ADVERTISEMENT

ಪಾರ್ಕ್ ನಿರ್ವಹಣೆ ಸ್ವಸಹಾಯ ಸಂಘಗಳಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 7:30 IST
Last Updated 8 ಏಪ್ರಿಲ್ 2025, 7:30 IST
ಸುಳ್ಯ ಪಟ್ಟಣದ ಮೂರು ಪಾರ್ಕ್ ಗಳ ನಿವ೯ಹಣೆಯನ್ನು ಸ್ವ ಸಹಾಯ ಸಂಘಗಳಿಗೆ ಹಸ್ತಾಂತರ ನಡೆಯಿತು.
ಸುಳ್ಯ ಪಟ್ಟಣದ ಮೂರು ಪಾರ್ಕ್ ಗಳ ನಿವ೯ಹಣೆಯನ್ನು ಸ್ವ ಸಹಾಯ ಸಂಘಗಳಿಗೆ ಹಸ್ತಾಂತರ ನಡೆಯಿತು.   

ಸುಳ್ಯ: ಉದ್ಯಾನವನಗಳ ನಿರ್ವಹಣೆಯ ಹೊಣೆಯನ್ನು ಸ್ವಸಹಾಯ ಸಂಘಗಳಿಗೆ ನೀಡುವ ನಿಟ್ಟಿನಲ್ಲಿ ಕೇಂದ್ರದ ಸರ್ಕಾರದ ಅಮೃತ್ ಮಿತ್ರ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸುಳ್ಯ‌ ಪಟ್ಟಣದ ಮೂರು ಪಾರ್ಕ್‌ಗಳಿಗೆ ಈ ಯೋಜನೆಯಡಿ ಅವಕಾಶ ಲಭಿಸಿದೆ.

ಪಟ್ಟಣದ ಕುರುಂಜಿಗುಡ್ಡೆ, ಬೀರಮಂಗಲ, ನೇತಾಜಿ ಪಾರ್ಕ್‌ಗಳನ್ನು ಸ್ಥಳೀಯ ಸ್ವಸಹಾಯ ಸಂಘಗಳಿಗೆ ನಿರ್ವಹಣೆಗೆ ನೀಡಲಾಗಿದ್ದು, ಮೂರು ಸಂಘಗಳಿಗೆ ಕಾಗದ ಪತ್ರಗಳ ಹಸ್ತಾಂತರ ಸೋಮವಾರ ನಡೆಯಿತು.

ಅಮೃತ್ ಮಿತ್ರ ನಿರ್ವಹಣೆಯಲ್ಲಿ ಒಂದು ವರ್ಷ ಅವಧಿಗೆ ಒಂದೊಂದು ಪಾರ್ಕ್‌ಗೆ  ₹5 ಲಕ್ಷ ಅನುದಾನ ಈ ಯೋಜನೆಯಲ್ಲಿ ‌ಬರಲಿದ್ದು, ಪಾರ್ಕ್ ನಿರ್ವಹಣೆ ಹಾಗೂ ಸ್ವಸಹಾಯ ಸಂಘಗಳಿಗೆ ಗೌರವಧನವಾಗಿ ಆ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ನಿರ್ವಹಣೆ ವಹಿಸಿಕೊಂಡಿರುವ ಸ್ವಸಹಾಯ ಸಂಘದವರು ಪಾರ್ಕ್‌ನಲ್ಲಿ ಸ್ವಚ್ಚತೆ ಕಾಪಾಡಬೇಕು. ಗಿಡಗಳಿಗೆ ನೀರು ಹಾಕಬೇಕು ಇತ್ಯಾದಿ‌ ಷರತ್ತುಗಳನ್ನು ಹಾಕಲಾಗಿದೆ.

ADVERTISEMENT

ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆಯ ಜವಾಬ್ದಾರಿ ಜನನಿ ಸ್ವಸಹಾಯ ಸಂಘದವರು ವಹಿಸಿಕೊಂಡದ್ದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಹಸ್ತಾಂತರ ಮಾಡಿದರು.

ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರಾದ ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ ದುಗಲಡ್ಕ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಉಮ್ಮರ್ ಕೆ.ಎಸ್., ರಿಯಾಜ್ ಕಟ್ಟೆಕಾರ್, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್, ಮುಖ್ಯಾಧಿಕಾರಿ ಸುಧಾಕರ್, ಸಮುದಾಯ ಸಂಘಟಕರಾದ ಜಯಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.