ADVERTISEMENT

ವಾಮಂಜೂರು: ಮರಳು ತುಂಬಿದ್ದ ಟಿಪ್ಪರ್ ವಶ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 6:13 IST
Last Updated 1 ಜುಲೈ 2025, 6:13 IST

ಮಂಗಳೂರು: ವಾಮಂಜೂರು ಅಮೃತನಗರ ಕುಟ್ಟಿಪಲ್ಕೆ ಪರಿಸರದಲ್ಲಿ ಟಿಪ್ಪರ್‌ ಲಾರಿಯನ್ನು ಹಾಗೂ ಅದರಲ್ಲಿ ತುಂಬಿದ್ದ ಮರಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಗಸ್ತು ಕರ್ತವ್ಯಲ್ಲಿದ್ದಾಗ ಅಮೃತನಗರ ಕುಟ್ಟಿಪಲ್ಕೆ ಬಳಿ ಮರಳನ್ನು ಅಕ್ರಮವಾಗಿ ಲಾರಿಗೆ ತುಂಬಿಸುತ್ತಿರುವ ಬಗ್ಗೆ ಶನಿವಾರ ಸಂಜೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ  ಕುಟ್ಟಿಪಲ್ಕೆ ರಸ್ತೆಯ ಬದಿಯಲ್ಲಿರುವ ಖಾಲಿ ಜಾಗದಲ್ಲಿ ಟಿಪ್ಪರ್ ನಿಲ್ಲಿಸಿದ್ದುದು ಕಂಡು ಬಂತು. ಅದರಲ್ಲಿದ್ದ ವ್ಯಕ್ತಿ ನಮ್ಮನ್ನು ನೋಡುತ್ತಿದ್ದಂತೆಯೇ ವಾಹನದಿಂದ ಇಳಿದು ಓಡಿ ಹೋದ. ಆ ಟಿಪ್ಪರ್‌ನಲ್ಲಿದ್ದ 3 ಯೂನಿಟ್‌ ಮರಳನ್ನು ಹಾಗೂ ಸುಮಾರು ₹ 7 ಲಕ್ಷ ಮೌಲ್ಯ ಟಿಪ್ಪರ್ ಅನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮರಳಿನ ಮೌಲ್ಯ ಅಂದಾಜು ₹ 15 ಸಾವಿರ ಆಗಬಹುದು ಎಂದು ಗ್ರಾಮಾಂತರ ಠಾಣೆಯ ಪಿಎಸ್‌ಐ ಅರುಣ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT