ADVERTISEMENT

ಪುತ್ತೂರು| ಮನೆಯ ಮೇಲೆ ಬಿದ್ದ ಮರ: ಚಾವಣಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:22 IST
Last Updated 17 ಜೂನ್ 2025, 14:22 IST
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ನೇರೋಳ್ತಡ್ಕ ಎಂಬಲ್ಲಿ ಮರವೊಂದು ಮರಿದು ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿರುವುದು
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ನೇರೋಳ್ತಡ್ಕ ಎಂಬಲ್ಲಿ ಮರವೊಂದು ಮರಿದು ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿರುವುದು   

ಪುತ್ತೂರು: ಮನೆಯೊಂದರ ಮೇಲೆ ಮರವೊಂದು ಮರಿದು ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾನಿಯಾಗಿರುವ ಘಟನೆ ತಾಲ್ಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ನೇರೋಳ್ತಡ್ಕ ಎಂಬಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಭಾರಿ ಮಳೆ ಮತ್ತು ಗಾಳಿಯಿಂದ ಅರಿಯಡ್ಕ ಗ್ರಾಮದ ನೇರೋಳ್ತಡ್ಕ ನಿವಾಸಿ ಜಯಂತಿ ಅವರ ಮನೆಯ ಮೇಲೆ ಪಕ್ಕದಲ್ಲಿದ್ದ ಬೃಹತ್‌ ಗಾತ್ರದ ಬೀಟೆ ಮರ ಮುರಿದು ಬಿದ್ದಿದೆ.

‘ರಬ್ಬರ್ ಟ್ಯಾಪಿಂಗ್ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮನೆಯ ಮಹಡಿಗೆ ಕಬ್ಬಿಣದ ತಗಡು ಶೀಟಿನ ಮೇಲ್ಛಾವಣಿ ನಿರ್ಮಿಸಿದ್ದೆ. ಮರ ಮೇಲ್ಛಾವಣಿಯ ಮೇಲೆಯೇ ಬಿದ್ದಿದೆ. ಚಾವಣಿ ಸಂಪೂರ್ಣ ಹಾನಿಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಘಟನೆಯ ವೇಳೆ ಮನೆಯೊಳಗಿದ್ದ ನಾನು, ಮಕ್ಕಳಾದ ಧನರಾಜ್ ಮತ್ತು ಚೇತನರಾಜ್ ಅವರು ಅಪಾಯದಿಂದ ಪಾರಾಗಿದ್ದೇವೆ’ ಎಂದು ಜಯಂತಿ ಹೇಳಿದರು.

ADVERTISEMENT

ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಕಾರ್ಯದರ್ಶಿ ವಿದ್ಯಾಧರ, ಗ್ರಾಮ ಆಡಳಿತಾಧಿಕಾರಿ ಗೋಪಿಲಾಲ್, ಅರಣ್ಯ ಇಲಾಖೆಯ ಅಧಿಕಾರಿ ರಾಜೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮೇಲೆ ಮುರಿದು ಬಿದ್ದಿದ್ದ ಮರವನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.