ADVERTISEMENT

ಅಂತರರಾಜ್ಯ ಗ್ರಿಪ್ ಹಗ್ಗ ಜಗ್ಗಾಟ: 26 ತಂಡ ಭಾಗಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 15:22 IST
Last Updated 19 ಡಿಸೆಂಬರ್ 2018, 15:22 IST
 ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ನಡೆದ ಅಂತರರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಎಸ್‌ಜಿವಿಕೆ ತಂಡ ಪ್ರಥಮ ಸ್ಥಾನ ಪಡೆಯಿತು.
 ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ನಡೆದ ಅಂತರರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಎಸ್‌ಜಿವಿಕೆ ತಂಡ ಪ್ರಥಮ ಸ್ಥಾನ ಪಡೆಯಿತು.   

ಮುಡಿಪು: ಕೈರಂಗಳ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ನಡೆದ ಅಂತರರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಎಸ್‌ಜಿವಿಕೆ ತಂಡ ಪ್ರಥಮ ಹಾಗೂ ಬಿ.ಸಿ.ರೋಡ್‌ನ ಶ್ರೀರಾಮ ಭಕ್ತಾಂಜನೇಯ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಪಂದ್ಯಾಕೂಟದ ಉದ್ಘಾಟನೆಯನ್ನು ಶಾರದಾ ಗಣಪತಿ ಸಂಸ್ಥೆಯ ಪ್ರಾಂಶುಪಾಲರಾದ ದಿವ್ಯದೀಪ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಟಿ.ಜಿ ರಾಜಾರಾಮ ಭಟ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಸುಂದರ ಪೂಜಾರಿ ಚೇಳೂರು, ಪ್ರಶಾಂತ್ ಗಟ್ಟಿ, ರಮೇಶ್ ಕುರ್ನಾಡು, ದೈಹಿಕ ಶಿಕ್ಷಕಿ ಶುಭ ಕೆ.ಹೆಚ್, ಗೋಪಾಲ ಮಿತ್ತಕೋಡಿ, ದೀಪಕ್ ಕೋಟ್ಯಾನ್ ಸಜಿಪ ಇದ್ದರು.

ಪಂದ್ಯಾಟದಲ್ಲಿ ಅಂತರರಾಜ್ಯದ ಒಟ್ಟು 26 ತಂಡಗಳು ಭಾಗವಹಿಸಿ ಎಸ್‌ಜಿವಿಕೆ ಪ್ರಥಮ, ಶ್ರೀರಾಮ ಭಕ್ತಾಂಜನೇಯ ಬಿ.ಸಿ.ರೋಡ್ ದ್ವಿತೀಯ, ಆಂಜನೇಯ ಕಣ್ವತೀರ್ಥ ತೃತೀಯ, ಅರಸು ಕುರಿಯಡಿತ್ತಾಯ ಮಜಿ ಬೋಳ್ಯಾರು ಚತುರ್ಥ, ಜೈ ಭಾರ್ಗವ ಕುಂಜರಗಿರಿ ಪಂಚಮ,ಶ್ರೀರಾಮ ಬೆಜ್ಜ ಷಷ್ಟಮ, ಯುವಕ ಮಂಡಲ ನಡುಮೊಗರು ಸಪ್ತಮ ಪ್ರಶಸ್ತಿಗಳನ್ನು ಪಡೆದುಕೊಂಡರು.

ADVERTISEMENT

ದಿವಾಕರ್ ಉಪ್ಪಳ ಹಾಗೂ ಪ್ರವೀಣ್ ಕುರ್ನಾಡು ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ತೀರ್ಪುಗಾರರಾಗಿ ರಾಮ ಸುವರ್ಣ, ಧನಂಜಯ ಬೋಳ್ಯಾರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.