ADVERTISEMENT

ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್‌ ಕಾರ್ಡ್ ಅಭಿಯಾನ: ನವೀನ್ ಶೆಟ್ಟಿ ಎಡ್ಮೆಮಾರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 15:32 IST
Last Updated 29 ಆಗಸ್ಟ್ 2022, 15:32 IST

ಮಂಗಳೂರು: ತುಳುವೆರ್ ಕುಡ್ಲ ಮಂಗಳೂರು, ‘ತುಳುನಾಡು ವಾರ್ತೆ’ ವಾರಪತ್ರಿಕೆ ಮತ್ತು ‘ನಮ್ಮ ಟಿವಿ’ ಆಶ್ರಯದಲ್ಲಿ ‘ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್‌ ಕಾರ್ಡ್ ಅಭಿಯಾನ’ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1ರಂದು ಬೆಳಿಗ್ಗೆ 10.30ಕ್ಕೆ ಬಂಜಾರ್ ಮಲೆ ಗ್ರಾಮದಿಂದ ಅಭಿಯಾನ ಆರಂಭಗೊಳ್ಳಲಿದೆ ಎಂದು ಸಂಘಟಕ ನವೀನ್ ಶೆಟ್ಟಿ ಎಡ್ಮೆಮಾರ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ, ತುಳು ಭಾಷೆಗೆ ಮಾನ್ಯತೆ ದೊರೆತಿಲ್ಲ. ಅನೇಕ ಸಂಘ–ಸಂಸ್ಥೆಗಳು ತಮ್ಮ ಧ್ವನಿಯನ್ನು ಎತ್ತಿದರೂ ಈವರೆಗೆ ಫಲ ಸಿಕ್ಕಿಲ್ಲ. ಹಾಗಾಗಿ ಪೋಸ್ಟ್ ಕಾರ್ಡ್ ಮೂಲಕ ತುಳುಭಾಷೆಗೆ ಅಧಿಕೃತ ಮಾನ್ಯತೆ ಒದಗಿಸುವಂತೆ ತುಳುವರಿಂದ ಪ್ರಧಾನಿಗೆ ಪೋಸ್ಟ್‌ ಕಾರ್ಡ್ ಕಳುಹಿಸುವ ವಿಭಿನ್ನ ಅಭಿಯಾನ ಆಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್ ಅನ್ನು ಅಂಚೆ ಮೂಲಕ ಪ್ರಧಾನಮಂತ್ರಿಗೆ ಕಳುಹಿಸುವ ಗುರಿ ಹೊಂದಲಾಗಿದೆ ಎಂದರು.

ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಎಲ್ಲ ತುಳುಪರ ಸಂಘಟನೆಗಳು ರಾಜಕೀಯ ಪಕ್ಷಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳು ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ತುಳುವೆರ್ ಕುಡ್ಲದ ಅಧ್ಯಕ್ಷ ಪ್ರತೀಕ್ ಪೂಜಾರಿ ಹೇಳಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಪೂಜಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಂ, ತುಳುನಾಡ ವಾರ್ತೆಯ ಪುನೀತ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.