ADVERTISEMENT

ವಿವಿಧೆಡೆ ವಿದ್ಯುತ್‌ ವ್ಯತ್ಯಯ 21ರಂದು

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 16:31 IST
Last Updated 18 ಜೂನ್ 2022, 16:31 IST

ಮಂಗಳೂರು: ಉಡುಪಿ ಜಿಲ್ಲೆಯ ವಿವಿಧ ಕಡೆ ವಿದ್ಯುತ್‌ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಇದೇ 21ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯಗೊಳ್ಳುವ ಪ್ರದೇಶಗಳು:

ನಿಟ್ಟೂರು ವಿದ್ಯುತ್ ಉಪಕೇಂದ್ರದ ಕುಡ್ಸೆಂಪ್‌ ಫೀಡರಿನಲ್ಲಿ ಹಾಗೂ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದ ಸಿಟಿ ಸೆಂಟರ್ ಫೀಡರಿನಲ್ಲಿ ಹಾಗೂ ಉದ್ಯಾವರ ಎಂ.ಯು.ಎಸ್.ಎಸ್‌ನಿಂದ ಹೊರಡುವ ಪಿತ್ರೋಡಿ ಮತ್ತು ಕೈಗಾರಿಕಾ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಇದೇ 21ರಂದು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಪಂದುಬೆಟ್ಟು, ಕಲ್ಮಾಡಿ, ಬಾಬುತೋಟ, ಕೊಪ್ಪಲತೋಟ, ಪಡುಕೆರೆ ರಸ್ತೆ, ಮಲ್ಪೆ ಪೇಟೆ, ಕಡಿಯಾಳಿ, ಕಲ್ಸಂಕ, ರಾಯಲ್ ಗಾರ್ಡನ್, ಗುಂಡಿಬೈಲು ದೊಡ್ಡಣಗುಡ್ಡೆ, ಬಾಳಿಗ ಆಸ್ಪತ್ರೆ, ಶಿರಿಬೀಡು, ಸಿಟಿ ಬಸ್ ಸ್ಟ್ಯಾಂಡ್, ಬನ್ನಂಜೆ, ಸಿಟಿ ಸೆಂಟರ್, ಅಂಕುದ್ರು, ಗೋವಿಂದಗುಡ್ಡೆ, ಪಿತ್ರೋಡಿ, ಮುದ್ದಲಗುಡ್ಡೆ, ಪಿತ್ರೋಡಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ADVERTISEMENT

ಮಣಿಪಾಲ ವಿದ್ಯುತ್ ಉಪಕೇಂದ್ರದ ಕೆ.ಎಂ.ಎಫ್ ಫೀಡರ್‌ನಲ್ಲಿ ಹಾಗೂ ಹಿರಿಯಡ್ಕ ವಿದ್ಯುತ್ ಉಪಕೇಂದ್ರದ ಮಾಣಾಯಿ ಫೀಡರಿನಲ್ಲಿ ಇದೇ 21ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಣಿಪಾಲ ಪಟ್ಟಣ, ವೇಣುಗೋಪಾಲ ದೇವಸ್ಥಾನದ ಹತ್ತಿರ, ಮಣಿಪಾಲ ಮೀಡಿಯಾ ನೆಟ್ ವರ್ಕ್, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, ಹರಿಖಂಡಿಗೆ, ವಡ್ಜ, ಸಾಣೆಕಲ್ಲು, ಮಾಣಾಯಿ, ನವಗ್ರಾಮ, ಪಂಚನಬೆಟ್ಟು, ಮೂಂಡುಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

ಉದ್ಯಾವರ ಎಂ.ಯು.ಎಸ್.ಎಸ್‌ನ ಉದ್ಯಾವರ ಫೀಡರಿನಲ್ಲಿ ಇದೇ 21ರಂದು ಬೆಳಿಗ್ಗೆ 9ರಿಂದ ಸಂಜೆ 5:30ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೂಡಬೆಟ್ಟು, ಏಣಗುಡ್ಡೆ, ಅಚ್ಚಡ, ಕೋಟೆ, ಮಟ್ಟು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತದೆ.

ಬ್ರಹ್ಮಾವರ ಉಪವಿದ್ಯುತ್ ಕೇಂದ್ರದ ವ್ಯಾಪ್ತಿಯ ಬ್ರಹ್ಮಾವರ, ಮಾಬುಕಳ, ಹೊನ್ನಾಳ, ಕೊಳಲಗಿರಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ವಾರಂಬಳ್ಳಿ, ಕುಮ್ರಗೋಡು, ಉಪ್ಪಿನಕೋಟೆ, ಬಾಳ್ತಾರು, ಸೂಲ್ಕುದ್ರು, ಚಾಂತಾರು, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೆಲ್ ಬೆಟ್ಟು, ಜಾತಬೆಟ್ಟು, ಹಾವಂಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

ಕಾರ್ಕಳ ತಾಲ್ಲೂಕಿನ ಬೆಳ್ಮಣ್ಣು ಉಪಕೇಂದ್ರದಿಂದ ಹೊಸ ವಿದ್ಯುತ್ ಮಾರ್ಗವನ್ನು ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ಮಣ್ಣು, ನಂದಳಿಕೆ, ಜಂತ್ರ, ಸಾಂತುಕೊಪ್ಪಳ, ಕೋಡಿಮಾರು, ಕೆದಿಂಜೆ, ಮಾವಿನಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ ಮುದ್ರಾಡಿ ಮತ್ತು ನಾಡ್ಪಾಲು ಮಾರ್ಗದ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಡ್ಪಾಲು, ಸೀತಾನದಿ, ಸೋಮೇಶ್ವರ, ಮುದ್ರಾಡಿ, ಉಪ್ಪಳ, ಕಬ್ಬಿನಾಲೆ, ವರಂಗ, ಮುನಿಯಾಲು, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತದೆ. ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.