ಉಳ್ಳಾಲ: ಉಳ್ಳಾಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರಸಿದ್ಧಿಯಾದ ಪುಣ್ಯಭೂಮಿಯಾಗಿದೆ. ಈ ಕ್ಷೇತ್ರಕ್ಕೆ ಹಜರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಅವರ ದರ್ಗಾ ಶರೀಫ್‌ನಿಂದ ಪ್ರಸಿದ್ಧಿ ಬಂದಿದೆ. ಅವರ ಧಾರ್ಮಿಕ ಪ್ರಭಾವವು ಸಾವಿರಾರು ಭಕ್ತರಿಗೆ ಮಾರ್ಗದರ್ಶನವಾಗಿದ್ದು, ಉಳ್ಳಾಲದ ಧಾರ್ಮಿಕ ಸ್ಥಾನಮಾನವನ್ನು ದೇಶದಾದ್ಯಂತ ಪ್ರಸಾರಗೊಳಿಸಿದೆ ಎಂದು ಅಬ್ದುಲ್ ವಾಸಿಹ್ ಬಾಖವಿ ಕುಟ್ಟಿ ಪುರಮ್ ಹೇಳಿದರು.
ಉಳ್ಳಾಲ ದರ್ಗಾದ ಉರುಸ್ ಪ್ರಯುಕ್ತ ದರ್ಗಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಈ ಪ್ರದೇಶದಲ್ಲಿ ತಾಜುಲ್ ಉಲಮಾ ಅವರು ಶೈಕ್ಷಣಿಕ ಬೆಳವಣಿಗೆಗೆ ಬಹುಮುಖ್ಯ ಪಾತ್ರ ವಹಿಸಿದ್ದರು. 1955ರಲ್ಲಿ ಉಳ್ಳಾಲಕ್ಕೆ ಬಂದಿದ್ದ ಅವರು, 62 ವರ್ಷ ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸಿದರು. 1972ರಲ್ಲಿ ಉಳ್ಳಾಲ ಅರೆಬಿಕ್ ಕಾಲೇಜು ಸ್ಥಾಪಿಸಿ, ಧಾರ್ಮಿಕ ಶಿಕ್ಷಣಕ್ಕೆ ಸಾಂಸ್ಥಿಕ ರೂಪ ನೀಡಿದರು ಎಂದರು.
ಅಶ್ಫಾಕ್ ಫೈಝಿ ನಂದಾವರ ಧಾರ್ಮಿಕ ಪ್ರವಚನ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಪ್ರಮುಖರಾದ ಕಣಚೂರು ಮೋನು, ರಫೀಕ್, ಜೆ.ಅಬ್ದುಲ್ ಹಮೀದ್, ಖತೀಬ್ ಶರೀಫ್ ಸಅದಿ, ಅಶ್ರಫ್ ರೈಟ್ ವೇ, ಮುಸ್ತಫಾ ಮದನಿಗರ, ನಾಝೀಮ್ ಮುಕ್ಕಚ್ಚೇರಿ, ಝಿಯಾದ್ ತಂಙಳ್, ಝೈನುದ್ದೀನ್ ಮೇಲಂಗಡಿ, ಪ್ರೊ.ಇಬ್ರಾಹಿಂ ಅಹ್ಸನಿ, ಝಕರಿಯಾ ಅಹ್ಸನಿ ಭಾಗವಹಿಸಿದ್ದರು.
ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.