ಮಂಗಳೂರು: ಮಹಾನಗರ ಪಾಲಿಕೆಯ ಬೋಳೂರು ವಾರ್ಡ್‌ನ ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಸಮಸ್ಯೆಯಾಗಿದ್ದ ಒಳಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯಕ್ತ ಆನಂದ್ ಸಿ.ಎಲ್ ತಿಳಿಸಿದ್ದಾರೆ.
ಬೋಳೂರು ವಾರ್ಡ್‌ನ ವೆಟ್‌ವೆಲ್‌ಗೆ ಕೆಯುಐಡಿಎಫ್‌ಸಿ ಎಂಜಿನಿಯರ್‌ಗಳೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಇಲ್ಲಿನ ವೆಟ್‌ವೆಲ್‌ಗೆ ಸಂಪರ್ಕಿಸುವ ಮುಖ್ಯ ಕೊಳವೆ ಮಾರ್ಗದ 70 ಮೀ ಉದ್ದದ ಒಳಚರಂಡಿ ಕೊಳವೆಯಲ್ಲಿ ತ್ಯಾಜ್ಯವು ಸರಾಗವಾಗಿ ಹರಿಯದೆ ಮ್ಯಾನ್‌ಹೋಲ್‌ಗಳಿಂದ ಉಕ್ಕಿ ಹರಿದು ತೆರೆದ ಚರಂಡಿಯಲ್ಲಿ ಮತ್ತು ಮನೆ ಸಂಪರ್ಕಗಳ ಕೊಳವೆಯಿಂದ ಹಿಮ್ಮುಖವಾಗಿ ಹರಿದು ಮನೆಗಳಿಗೆ ಬರುತ್ತಿರುವುದು ಕಂಡು ಬಂದಿತ್ತು. ಈ ಕಾರಣ ಸಂಬಂಧಪಟ್ಟ ಗುತ್ತಿಗೆದಾರರೇ ಇದರ ವೆಚ್ಚ ಭರಿಸಿ ದುರಸ್ತಿಗೊಳಿಸುವಂತೆ ಕೆಯುಐಡಿಎಫ್‌ಸಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಒಳಚರಂಡಿ ಪುನರ್ ನಿರ್ಮಾಣ ಕಾರ್ಯ ಜ.23ರಿಂದ ಆರಮಭವಾಗಿದೆ. ಇನ್ನು ಸಮಸ್ಯೆ ಪರಿಹಾರವಾಗಲಿದ್ದು, ಒಳಚರಂಡಿ ಸಂಪರ್ಕ ವಂಚಿತ ಆಸುಪಾಸಿನ 50 ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.