ADVERTISEMENT

ವಿಟ್ಲ: ಲಕ್ಷಾಂತರ ಮೌಲ್ಯದ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:43 IST
Last Updated 7 ಫೆಬ್ರುವರಿ 2023, 4:43 IST
ಫೋಟೋ: ಕಳ್ಳತನ ನಡೆದ ಮನೆ 
ಫೋಟೋ: ಕಳ್ಳತನ ನಡೆದ ಮನೆ    

ವಿಟ್ಲ: ಕಾನತ್ತಡ್ಕ ಮನೆಯೊಂದರ ಹಿಂಬಾಗಿಲು ಒಡೆದು ₹ 1.25 ಲಕ್ಷ ನಗದು ಹಾಗೂ ಸುಮಾರು 115 ಗ್ರಾಂ ಚಿನ್ನದ ಆಭರಣ ಕಳವು ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನತ್ತಡ್ಕ ನಿವಾಸಿ ರಹೀಮ್ ಶಾನ್ ಕುಟುಂಬದವರು ಮದುವೆಗೆ ತೆರಳಿದ್ದ ವೇಳೆ, ಫೆಬ್ರುವರಿ 5ರಂದು ರಾತ್ರಿ ಕಳವು ನಡೆದಿದೆ. ಕಪಾಟಿನಲ್ಲಿದ್ದ ಚಿನ್ನದ 3 ಬ್ರೇಸ್‌ಲೆಟ್, 4 ಸೆಟ್ ಕಿವಿಯ ಬೆಂಡೋಲೆ, ವಜ್ರವಿರುವ ಬೆಂಡೋಲೆ, ಉಂಗುರ, ಸೊಂಟದ ಆಭರಣ, ಚೈನ್, ಬಳೆಗಳು, ಪೆಂಡೆಂಟ್ ಕಳವಾಗಿದೆ.

ಮಕ್ಕಳ ವಾಚ್ ಕೂಡ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‌ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ತಂಡ ಸ್ಥಳಕ್ಕೆ ತೆರಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.