ADVERTISEMENT

ವಿಟ್ಲ: ಹಳ್ಳಕ್ಕೆ ವಾಲಿದ ಬಸ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:28 IST
Last Updated 12 ಜೂನ್ 2025, 15:28 IST
ವಿಟ್ಲ ಸಮೀಪದ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಬಿಟ್ಟು ಹೊಂಡಕ್ಕೆ ಇಳಿದಿರುವುದು
ವಿಟ್ಲ ಸಮೀಪದ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಬಿಟ್ಟು ಹೊಂಡಕ್ಕೆ ಇಳಿದಿರುವುದು   

ವಿಟ್ಲ: ಪುತ್ತೂರಿನಿಂದ ಉಪ್ಪಳ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ರಸ್ತೆ ಬಿಟ್ಟು ಹೊಂಡಕ್ಕೆ ಇಳಿದಿದ್ದು, ಅದೃಷ್ಟವಶಾತ್  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬಸ್ಸಿನಲ್ಲಿ ಕನ್ಯಾನ, ಮುಗುಳಿ ಬಾಯಾರು, ಉಪ್ಪಳಕ್ಕೆ ಹೋಗುವ ನೂರಾರು ಪ್ರಯಾಣಿಕರಿದ್ದರು. ನಿತ್ಯವೂ ಹೀಗೆ ಬಸ್ ಚಾಲಕರ ಅತಿಯಾದ ವೇಗದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು ಭಯಭೀತರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT