
ಮಂಗಳೂರು: ಇಲ್ಲಿಯ ಅತ್ತಾವರದ ಅಪಾರ್ಟ್‌ಮೆಂಟ್‌ವೊಂದರ 12ನೇ ಅಂತಸ್ತಿನ ಫ್ಲ್ಯಾಟ್‌ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಶೈನಾ ಮುಸ್ಬಾ (58) ಮೃತ ಮಹಿಳೆ. ಫ್ಲ್ಯಾಟ್‌ನಲ್ಲಿ ಒಂದೇ ಕುಟುಂಬದ ಐವರು ಮಕ್ಕಳು, ಮೂವರು ಮಹಿಳೆಯರು ವಾಸಿಸುತ್ತಿದ್ದರು. ಮನೆಯಲ್ಲಿದ್ದ ಇನ್ನುಳಿದ ಎಲ್ಲ ಸದಸ್ಯರು ಹೊರಗೆ ಬಂದಿದ್ದು, ಶೈನಾ ಮಾತ್ರ ಬಾತ್‌ರೂಮ್‌ನಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಫ್ಲ್ಯಾಟ್‌ನ ಮುಂಬಾಗಿಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೋಫಾಸೆಟ್‌ಗಳು, ಎಲ್‌ಇಡಿ ಟಿವಿ ಮತ್ತು ಹಾಲ್‌ನಲ್ಲಿರುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಮಂಗಳೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸಿ.ಆರ್. ರಂಗನಾಥ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.