ADVERTISEMENT

ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:58 IST
Last Updated 30 ಏಪ್ರಿಲ್ 2025, 15:58 IST
ಭಾಗೀರಥಿ
ಭಾಗೀರಥಿ   

ಪುತ್ತೂರು: ಮನೆಯ ಬದಿಯಲ್ಲಿ ಹಾದು ಹೋಗಿದ್ದ ಕೊಳವೆಬಾವಿ ಸಂಪರ್ಕದ ವಿದ್ಯುತ್ ತಂತಿಯಿಂದ ಶಾಕ್ ಹೊಡೆದು ತಾಲ್ಲೂಕಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ಎಂಬಲ್ಲಿ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ.

ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ನಿವಾಸಿ ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಮೃತಪಟ್ಟವರು.
ಮನೆಯ ತಾರಸಿಯ ಮೇಲೆ ಬದಿಯಲ್ಲಿ ಮಳೆನೀರು ತುಂಬಿಕೊಂಡಿತ್ತು. ಭಾಗೀರಥಿ ಅವರು ತಾರಸಿಗೆ ಹೋಗಿ ಸ್ವಚ್ಛ ಮಾಡುತ್ತಿದ್ದ ವೇಳೆ ಮನೆಯ ಬದಿಯಲ್ಲಿ ಹಾದು ಹೋಗಿದ್ದ ಕೊಳವೆಬಾವಿ ಸಂಪರ್ಕದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT