ADVERTISEMENT

ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 5:25 IST
Last Updated 22 ಫೆಬ್ರುವರಿ 2012, 5:25 IST

ಮಲೇಬೆನ್ನೂರು: ಪ್ರಸಕ್ತ ಸಾಲಿನ ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆ ಹಾಗೂ ರಥೋತ್ಸವಕ್ಕೆ ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ದೇಶಿಕೇಂದ್ರ ಸ್ವಾಮೀಜಿ  ಜ್ಯೋತಿಬೆಳಗಿಸಿ ಮಂಗಳವಾರ ಚಾಲನೆ ನೀಡಿದರು.

ಒಂದು ವಾರಗಳ ಕಾಲ ನಡೆಯುವ ಧಾರ್ಮಿಕ  ವಿಧಿಗಳಾದ ನಂದಿಧ್ವಜ ಪೂಜೆ, ಧ್ವಜಾರೋಹಣ, ಭಜನೆ ಕೀರ್ತನೆ ಹಾಗೂ ಜಾಗರಣೆಗೆ ಮಂಗಳವಾದ್ಯ, ವೇದಘೋಷ, ಶಾಂತಿಮಂತ್ರ ಪಠಣ ನಂತರ ಚಾಲನೆ ನೀಡಿ ಶುಭ ಕೋರಿದರು.

ನೊಂದ ಮನಸ್ಸಿಗೆ ಸಮಾಧಾನ ತರುವ ಪವಿತ್ರ ತಾಣದಲ್ಲಿ ಉತ್ಸವ ನಡೆಯುವ ವೇಳೆ ಶಾಂತಿ, ಸುತ್ತಮುತ್ತಲ ಪ್ರದೇಶದ ಸ್ವಚ್ಛತೆ ಕಾಪಾಡುವಂತೆ ಭಕ್ತ ಸಮೂಹಕ್ಕೆ ಸಲಹೆ ನೀಡಿದರು. ಇದಕ್ಕೂ ಮುನ್ನ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕರಿಬಸವೇಶ್ವರ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.  

ರಾಜ್ಯದ ವಿವಿಧಡೆಯಿಂದ ಸಹಸ್ರಾರು ಸಂಖ್ಯೆ ಭಕ್ತರು ಆಗಮಿಸ್ದ್ದಿದು ದೇವಾಲಯದ ಆವರಣ ತುಂಗಭದ್ರ ನದಿ ತೀರ ಗಿಜಿಗುಡುತಿತ್ತು. ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.
ಹೆಚ್ಚಿನ ಸಂಖ್ಯೆ ಪೊಲೀಸರು ಭದ್ರತೆ ಒದಗಿಸಿದ್ದರು.  

ಇಂದಿನ ಕಾರ್ಯಕ್ರಮ: ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ದೇಶಿಕೇಂದ್ರ ಸ್ವಾಮೀಜಿ  ಅವರಿಂದ ರಥಪೂಜೆ ರಾಜಬೀದಿಯಲ್ಲಿ ಕರಿಬಸವೇಶ್ವರರ ಮಹಾರಥೋತ್ಸವ ಬೆಳಿಗ್ಗೆ 8ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.