ADVERTISEMENT

ಉದ್ಯೋಗ ಖಾತ್ರಿ ದೂರು: ಸಿದ್ದೇಶ್ವರ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:50 IST
Last Updated 8 ಫೆಬ್ರುವರಿ 2011, 6:50 IST

ದಾವಣಗೆರೆ: ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ಅದರ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ 2010-11ನೇ ಸಾಲಿಗೆ 156 ಕೋಟಿ ಮಂಜೂರಾಗಿದೆ. 2,13,977 ಮಂದಿ ಜಾಬ್‌ಕಾರ್ಡ್ ಹೊಂದಿದ್ದಾರೆ. ಆದರೆ, ಕಾಮಗಾರಿ ಕುರಿತು ದೂರು ಕೇಳಿ ಬಂದಿವೆ. ಮುಂದಿನ ಸಭೆಯಲ್ಲಿ ಆ ಕುರಿತು ಹೆಚ್ಚಿನ ಚರ್ಚೆ ನಡೆಸೋಣ. ಅದಕ್ಕೂ ಮೊದಲು ಸ್ಥಳ ಪರಿಶೀಲನೆ ನಡೆಸೋಣ ಎಂದರು.

ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ಅಡಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗೆ ಕಾಮಗಾರಿ ಪೂರೈಸಿ, ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಮಳೆ ಹೆಚ್ಚು ಬಂದ ಕಾರಣ ಅಂತರ್ಜಲ ಹೆಚ್ಚಾಗಿದ್ದು, ಫ್ಲೋರೈಡ್ ಅಂಶ ಕಡಿಮೆಯಾಗಿದೆ. ಈ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿ ವರದಿ ನೀಡಿ ಎಂದು ಸೂಚಿಸಿದರು. ಹದಡಿಯಲ್ಲಿ ್ಙ9.88 ಕೋಟಿ, ಮಾಯಕೊಂಡದಲ್ಲಿ ್ಙ 12.8 ಕೋಟಿ, ಕೊಡಗನೂರು ್ಙ 7.2 ಕೋಟಿ, ಹೆಬ್ಬಾಳು ್ಙ 5.77 ಕೋಟಿ, ನಾಗನೂರು ್ಙ 11 ಕೋಟಿ, ಮಾಳಗೊಂಡನಹಳ್ಳಿ ್ಙ 3.7 ಕೋಟಿ ಮಲೇಬೆನ್ನೂರು, ್ಙ 22.32 ಕೋಟಿ, ಕೊಂಡಜ್ಜಿ ್ಙ 6.6 ಕೋಟಿ ಹಾಗೂ ಹೊಳೆಸಿರಿಗೆರೆಯಲ್ಲಿ ್ಙ 7.56 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿವೆ.

ಹದಡಿಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಉಳಿದೆಡೆ ಮುಗಿಯುವ ಹಂತದಲ್ಲಿವೆ. ತೆಲಿಗಿಯಲ್ಲಿ ್ಙ 27.25 ಕೋಟಿ  ಮಂಜೂರಾಗಿದೆ. ಹರಕನಹಾಳ್‌ನಲ್ಲಿ ಕಾಮಗಾರಿ ಆರಂಭಿಸಲು ್ಙ 23.31 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಿಇಒ ಗುತ್ತಿ ಜಂಬುನಾಥ್ ಮಾಹಿತಿ ನೀಡಿದರು.ಪೂರ್ಣಗೊಂಡ ಕಾಮಗಾರಿಗಳನ್ನು ಸ್ಥಳೀಯ ಶಾಸಕರಿಂದ ಉದ್ಘಾಟಿಸಿ, ಜನತೆಗೆ ಅರ್ಪಿಸಿ, ತಡಮಾಡುವುದು ಬೇಡ. ನ್ಯಾಮತಿಯಲ್ಲಿ ನೀರಿನ ತೊಂದರೆ ಇದ್ದು, ಹೆಚ್ಚು ಗಮನ ಹರಿಸಿ, ಸಮಸ್ಯೆ ಇರುವ ಭಾಗಗಳಲ್ಲಿ ಕಾಮಗಾರಿಗೆ ಬೇಕಾದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿ, ವಿಳಂಬ ಮಾಡುವುದು ಬೇಡ ಎಂದು ಸಂಸದರು ಸೂಚಿಸಿದರು.

ಪಿಎಂಜಿಎಸ್‌ವೈ ಯೋಜನೆ ಅಡಿ 295.66 ಕಿ.ಮೀ. ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿತ್ತು. ಅದರಲ್ಲಿ 227.7 ಕಿ.ಮೀ. ಪೂರ್ಣಗೊಂಡಿದೆ. 10 ರಸ್ತೆ ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಹೊನ್ನಾಳಿ ತಾಲ್ಲೂಕಿನಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿವೆ. ನಾವು ನಿಮಗೆ ತಿಳಿಸಬೇಕಾ? ಸ್ಥಳಕ್ಕೆ ಹೋಗಿ ನೋಡುವುದಿಲ್ಲವೇ? ಇಂದಿರಾ ಆವಾಜ್ ಅಡಿ 12,865 ಮನೆ ಮಂಜೂರಾಗಿದ್ದು, 7,683 ಮನೆ ಪೂರ್ಣಗೊಂಡಿವೆ. 4,873 ಮನೆಗಳು ಪ್ರಗತಿಯಲ್ಲಿವೆ. 303 ಆರಂಭಿಸಿಲ್ಲ. ಶಾಸಕರನ್ನು ಸಂಪರ್ಕಿಸಿ, ಜಾಗ ಪಡೆಯಿರಿ. ಹಣ ವಾಪಸ್ ಹೋಗುವ ಮುನ್ನ ಮನೆ ನಿರ್ಮಿಸಿ ಎಂದು ಸಿದ್ದೇಶ್ವರ ಎಂಜಿನಿಯರ್‌ಗಳನ್ನು ತಾಕೀತು ಮಾಡಿದರು.ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಜುಂಜಾನಾಯ್ಕೇ, ಎಚ್.ಪಿ. ರಾಜೇಶ್, ಜಮುನಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.