ADVERTISEMENT

ಕಡತನಾಳ ಸೇತುವೆ ವಾರದಲ್ಲಿ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:00 IST
Last Updated 11 ಜೂನ್ 2011, 9:00 IST

 ಚನ್ನಮ್ಮನ ಕಿತ್ತೂರು (ಕಡತನಾಳ): ಸಂಗೊಳ್ಳಿ-ಇಟಗಿ ಕ್ರಾಸ್ ಮುಖ್ಯ ರಸ್ತೆಯ ಕಡತನಾಳ ಗ್ರಾಮದ ಹತ್ತಿರ ಬರುವ ಕಡತನಾಳ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ನಬಾರ್ಡ್ ಯೋಜನೆಯಡಿ ರೂ. 45ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಮೇಲುಸ್ತುವಾರಿ ನಡೆದಿದೆ. ಸೇತುವೆ ಹತ್ತಿರದ ಸುಮಾರು ಎರಡು ನೂರು ಮೀಟರ್ ರಸ್ತೆಯನ್ನೂ ದುರಸ್ತಿ ಮಾಡಲಾಗುತ್ತಿದೆ.

ಮೊದಲಿದ್ದ ಸೇತುವೆ ಮೇಲೆ  ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಯವರು ಈಗಿರುವ ಅಂತರ ಹೆಚ್ಚಿಸಿ ಸೇತುವೆ ನಿರ್ಮಾಣ ಮಾಡುವ ಕ್ರಿಯಾ ಯೋಜನೆ ಸಿದ್ಧಪಡಿಸಿದರು. `ಸೂಕ್ತ ಅಂತರ ಹಾಗೂ ಅದರ ಸಮೀಪದ ರಸ್ತೆ ದುರಸ್ತಿಯಿಂದಾಗಿ ಈ ಸೇತುವೆ ಮೇಲಿಂದ ಹಾದು ಹೋಗುವ ಲೋಡ್ ತುಂಬಿದ ವಾಹನಗಳಿಗೆ ಅನುಕೂಲವಾದಂತಾಗಿದೆ~ ಎಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.