ADVERTISEMENT

ಕಳಪೆ ಕಾಮಗಾರಿ: ತಜ್ಞರ ಪರಿಶೀಲನೆಗೆ ಶಿಫಾರಸು

ಚಟ್ನಹಳ್ಳಿಗೆ ಲೋಕಾಯುಕ್ತ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:51 IST
Last Updated 5 ಸೆಪ್ಟೆಂಬರ್ 2013, 6:51 IST

ನ್ಯಾಮತಿ: ಸಮೀಪದ ಚಟ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರಿನ ಮೇಲೆ ದಾವಣಗೆರೆ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಎನ್. ಲಿಂಗಾರೆಡ್ಡಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ವಿವರ: ಗ್ರಾಮದ ರೈತ ಮುಖಂಡ ಚಟ್ನಹಳ್ಳಿ ಮಂಜಪ್ಪ ಎಂಬುವರು ಗ್ರಾಮ ಪಂಚಾಯ್ತಿಯಿಂದ 2007-08ರಿಂದ ನಡೆದ ಜಲಾನಯನ ನಿರ್ವಹಣೆಯಲ್ಲಿ ಹಾಗೂ ನರೇಗಾ ಯೋಜನೆ ಅಡಿಯಲ್ಲಿ ನಡೆದ ರಸ್ತೆ, ಬಾಕ್ಸ್ ಚರಂಡಿ, ಫೀಡರ್ ಚರಂಡಿ ಕಾಮಗಾರಿಗಳ ಬಗ್ಗೆ ದೂರು ನೀಡಲಾಗಿತ್ತು.

ಗ್ರಾಮದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳು ಸೇರಿದಂತೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತ ರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ  ತಮಗೆ ಲೋಕಾಯುಕ್ತರ ಆದೇಶದ ಮೇರೆಗೆ ತಾವು ಭೇಟಿ ನೀಡಿ ಕಡತ ಮತ್ತು ಕಾಮಗಾರಿ ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಪರಿಣತರಿಂದ ಪರಿಶೀಲನೆಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.

ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ನೋಡೆಲ್ ಅಧಿಕಾರಿ ಕೆಂಚಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿ.ಬಿ. ಲೀಲಾ, ಉಪಾಧ್ಯಕ್ಷ ಷಣ್ಮುಖಪ್ಪ ಮತ್ತು ಸದಸ್ಯರು, ಕಾರ್ಯದರ್ಶಿ ಎಚ್.ಕೆ. ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.