ADVERTISEMENT

ಚನ್ನಗಿರಿ: ಸಿಡಿಲಿಗೆ ಎಮ್ಮೆ ಸಾವು, 14 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:18 IST
Last Updated 4 ಅಕ್ಟೋಬರ್ 2017, 6:18 IST

ಚನ್ನಗಿರಿ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆ ಬಿದ್ದಿದೆ. ಕತ್ತಲಗೆರೆ ಗ್ರಾಮದಲ್ಲಿ ಸಿಡಿಲಿಗೆ ಒಂದು ಎಮ್ಮೆ ಬಲಿಯಾಗಿದೆ. ವಿವಿಧ ಗ್ರಾಮಗಳಲ್ಲಿ 14 ಮನೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನ ಮಳೆ ವಿವರ: ಚನ್ನಗಿರಿ 22.5 ಮಿ.ಮೀ, ದೇವರಹಳ್ಳಿ 12.2, ಕತ್ತಲಗೆರೆ 52.2, ತ್ಯಾವಣಿಗೆ 50.6, ಬಸವಾಪಟ್ಟಣ 20, ಸಂತೇಬೆನ್ನೂರು 51.3, ಉಬ್ರಾಣಿ 42.6 ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 30.6 ಮಿ.ಮೀ ಮಳೆ ಬಿದ್ದಿದೆ. ಸೋಮವಾರ ರಾತ್ರಿ ಬಿದ್ದ ಮಳೆಗೆ ಹಲವಾರು ಕೆರೆಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಕಾಕನೂರು ಬಳಿಯ ಹಿರೇಹಳ್ಳ ಮತ್ತೆ ಮೈದುಂಬಿ ಹರಿಯುತ್ತಿದೆ. ಉಬ್ರಾಣಿ ಹೋಬಳಿಯ ಜಮ್ಮಾಪುರ, ಬೀಡುಗೊಂಡನಹಳ್ಳಿ ಹಾಗೂ ಗೊಪ್ಪೇನಹಳ್ಳಿ ಗ್ರಾಮದ ಕೆರೆಗಳು ಕೋಡಿ ಬಿದ್ದಿವೆ.

ಮಳೆಗೆ ತಾಲ್ಲೂಕಿನ ಚನ್ನಗಿರಿ ಪಟ್ಟಣ 1, ಚಿಕ್ಕಕುರುಬರಹಳ್ಳಿ 1, ಜಮ್ಮಾಪುರ 1, ಗಂಗಗೊಂಡನಹಳ್ಳಿ 1, ಕೊಮಾರನಹಳ್ಳಿ 1, ಕತ್ತಲಗೆರೆ 1, ವಡ್ನಾಳ್ 3, ಮರಡಿ 1, ಗೊಲ್ಲರಹಳ್ಳಿ 1, ಹಿರೇಕೋಗಲೂರು ಗ್ರಾಮದಲ್ಲಿ 2 ಮನೆಗಳು ಸೇರಿ ಒಟ್ಟು 14 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಕತ್ತಲಗೆರೆ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಬಲಿಯಾಗಿದೆ. ಅದರ ಮೌಲ್ಯ ₹ 30 ಸಾವಿರ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ₹ 1.70 ಲಕ್ಷ ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಎಸ್.ಪದ್ಮಕುಮಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.