ADVERTISEMENT

ನಲಜರುವ ಓಬಳಸ್ವಾಮಿ ಜಾತ್ರೆ; ಮಣೇವು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 7:30 IST
Last Updated 19 ಮಾರ್ಚ್ 2012, 7:30 IST

ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರುದ್ರಮ್ಮನಹಳ್ಳಿಯಲ್ಲಿನ ನಾಯಕ ಜನಾಂಗದ ನಲಜರುವ ಓಬಳಸ್ವಾಮಿ ದೇವರ ನೂತನ ಪೂಜಾರಿಗಳ ಪಟ್ಟಾಭಿಷೇಕ ಮತ್ತು ಕಡುಬಿನ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶನಿವಾರ ನೂತನ ಪೂಜಾರಿಗಳಿಗೆ ಪಟ್ಟಾಭಿಷೇಕ ಮಾಡಲಾಗಿತ್ತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ರಾತ್ರಿ ಗ್ರಾಮದಲ್ಲಿನ ದೇವಸ್ಥಾನದಲ್ಲಿ ದೇವರನ್ನು ಗುಡಿಗುಂಬಿಸಲಾಯಿತು.

ಭಾನುವಾರ ಬೆಳಿಗ್ಗೆ ಗುಗ್ಗರಿ ಅಭಿಷೇಕ, 101 ಪೂಜೆಗಳು, ಸೂರ್ಯನ ಪಾಡ್ಯ ತೀರಿಸುವುದು, ದೇವರ ಎತ್ತುಗಳ ಬಸವಂತ ಕಾರ್ಯಕ್ರಮ, ಮಣೇವು ಕಾರ್ಯಕ್ರಮ, ದಾಸೋಹ ಕಾರ್ಯಗಳು ನಡೆದವು. ಚಿತ್ರದುರ್ಗ, ಬಳ್ಳಾರಿ ಹಾಗೂ ನೆರೆಯ ಆಂಧ್ರದ ಅನಂತಪುರ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿ ಹರಕೆ ಒಪ್ಪಿಸಿದರು.

ADVERTISEMENT

ಈ ದೇವರಿಗೆ ಸಂಬಂಧಪಟ್ಟ ಒಂಬತ್ತು ಮಂದಿ ಯಜಮಾನರು ನೇತೃತ್ವ ವಹಿಸಿದ್ದರು.

ಸಹಪಠ್ಯ: ತಾಲ್ಲೂಕಿನ ಬಿ.ಜಿ. ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈಚೆಗೆ ಕ್ಲಸ್ಟರ್‌ಮಟ್ಟದ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ  ಆಶ್ರಯದಲ್ಲಿ ಸರ್ವಶಿಕ್ಷಣ ಅಭಿಯಾನ ಅಡಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯೆಟ್ ಉಪನ್ಯಾಸಕ ಡಿ. ಹನುಮಂತರಾಯಪ್ಪ, `ಮಕ್ಕಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ಪರಿಪೂರ್ಣ ಶಿಕ್ಷಣ ಪಡೆದುಕೊಳ್ಳಲು ಪೋಷಕರು ಸಹಕಾರಿಯಾಗಬೇಕು~ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ ವಹಿಸಿದ್ದರು.

ಡಯೆಟ್ ಉಪನ್ಯಾಸಕರಾದ ಬಿ.ವಿ. ಸುಧಾ, ರೇಣುಕಮ್ಮ, ಶಾಲಾಭಿವೃದ್ಧಿ ಸಮಿತಿಯ ನಾಗೇಶ್, ಮುಖ್ಯಶಿಕ್ಷಕ ಎ.ಕೆ.ಡಿ. ದುರುಗಪ್ಪ ಮತ್ತು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.
ಐಆರ್‌ಟಿ ಮಂಜುನಾಥ್ ಸ್ವಾಗತಿಸಿದರು. ಶಿಕ್ಷಕ ಅಶೋಕ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.