ADVERTISEMENT

ಪಾಲಿಕೆ: 100 ಕೋಟಿ ಕ್ರಿಯಾಯೋಜನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:30 IST
Last Updated 9 ಫೆಬ್ರುವರಿ 2011, 10:30 IST

:
ದಾವಣಗೆರೆ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಎರಡನೇ ಹಂತದಲ್ಲಿ ಮಹಾನಗರ ಪಾಲಿಕೆಗೆ ನೀಡಲಾಗುತ್ತಿರುವ ್ಙ 100 ಕೋಟಿ ಕ್ರಿಯಾಯೋಜನೆಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಪೂರ್ಣಗೊಳಿಸಿತು.ರೂ.35 ಕೋಟಿ ವೆಚ್ಚದಲ್ಲಿ ರಸ್ತೆ, ್ಙ 20 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ, ರೂ. 10 ಕೋಟಿ ವೆಚ್ಚದಲ್ಲಿ ಯುಜಿಡಿ ನಿರ್ಮಾಣ, ್ಙ 20 ಕೋಟಿ ವೆಚ್ಚದಲ್ಲಿ ಕಸ ನಿರ್ವಹಣೆ, ರೂ.10 ಕೋಟಿ ವೆಚ್ಚದಲ್ಲಿ ನಗರದ ವಿವಿಧೆಡೆ ಸಿಗ್ನಲ್ ದೀಪ ಅಳವಡಿಕೆ, ಪಾರ್ಕ್‌ಗಳ ನಿರ್ವಹಣೆ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳುವ ಕುರಿತು ಸಿದ್ಧಗೊಂಡ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಿ, ಚರ್ಚಿಸಲಾಯಿತು.

ರಸ್ತೆ ಕಾಮಗಾರಿಗೆ ಮೀಸಲಾದ ಹಣದಲ್ಲಿ ರೂ 20 ಕೋಟಿ ಲೋಕೋಪಯೋಗಿ ಇಲಾಖೆಗೆ ನೀಡಿ, ಹದಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಅಭಿವೃದ್ಧಿ, ಫುಟ್‌ಪಾತ್, ಚರಂಡಿ ನಿರ್ಮಿಸಲು ನಿರ್ಧರಿಸಲಾಯಿತು.ಎರಡನೇ ಹಂತದಲ್ಲಿ ನೀಡಲಾಗುತ್ತಿರುವ ರೂ.100 ಕೋಟಿ ಮೂರು ಹಂತದಲ್ಲಿ ದೊರೆಯಲಿದ್ದು, ಮೊದಲು ್ಙ 33 ಕೋಟಿ ಬಿಡುಗಡೆಯಾಗಲಿದೆ. ಕ್ರಿಯಾಯೋಜನೆಯ ಅನುಪಾತದ ಆಧಾರದಲ್ಲಿ ಹಣವನ್ನು ವಿಂಗಡಿಸಿ ಕಾಮಗಾರಿ ಕೈಗೊಳ್ಳಬೇಕು. ನಿಗದಿತ ಅವಧಿಯ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಚಿವ ರವೀಂದ್ರನಾಥ್ ಸೂಚಿಸಿದರು.

ದಾವಣಗೆರೆ ನಗರವನ್ನು ಸುಂದರಗೊಳಿಸಲು ಎಲ್ಲರೂ ಶ್ರಮಿಸಬೇಕು. ಎಸ್‌ಒಜಿ ಕಾಲೊನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಒಳ ಚರಂಡಿ ನಿರ್ಮಿಸಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.ಮೊದಲ ಹಂತದಲ್ಲಿ ಘೊಷಿಸಲಾದ ರೂ. 100 ಕೋಟಿಯಲ್ಲಿ ಈಗಾಗಲೇ ರೂ. 91 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 87 ಕೋಟಿ ಖರ್ಚಾಗಿದೆ. ರೂ.4 ಕೋಟಿ ಬಾಕಿ ಉಳಿದಿದ್ದು, ಒಂದು ತಿಂಗಳಲ್ಲಿ ಪೂರ್ಣ ಬಳಕೆ ಮಾಡಿಕೊಳ್ಳಲಾಗುವುದು. ನಂತರ ಉಳಿದ ್ಙ 9 ಕೋಟಿ ಬಿಡುಗಡೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮಾಹಿತಿ ನೀಡಿದರು.

ಮೇಯರ್ ಎಂ.ಜಿ. ಬಕ್ಕೇಶ್ ಮಾತನಾಡಿ, ಯುಐಡಿಎಸ್‌ಎಸ್‌ಎಂಟಿ ಯೋಜನೆಯಲ್ಲಿ ಈಗಾಗಲೇ ನಗರದ ಒಳಗೆ 14 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಇನ್ನೂ 10-15 ಕಿ.ಮೀ. ರಸ್ತೆ ನಿರ್ಮಿಸಬೇಕಿದೆ. ಬಾಕಿ ಉಳಿದ ಹಣವನ್ನು ಬಳಸಿಕೊಂಡು ತ್ವರಿತ ಕಾಮಗಾರಿ ಕೈಗೊಳ್ಳುವಂತೆ ಸಲಹೆ ನೀಡಿದರು.ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಮನೂರು ಶಿವಶಂಕರಪ್ಪ, ಆಯುಕ್ತ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಹಾಲಮ್ಮ, ಸಂಕೋಳ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.