ADVERTISEMENT

ಮರಳು ಅಕ್ರಮ ಸಾಗಾಟಕ್ಕೆ ಕಡಿವಾಣ: ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:15 IST
Last Updated 17 ಅಕ್ಟೋಬರ್ 2012, 9:15 IST

ಹೊನ್ನಾಳಿ:  ತಾಲ್ಲೂಕಿನ ತುಂಗಭದ್ರಾ ನದಿ ಪಾತ್ರದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ತಾಲ್ಲೂಕುಮಟ್ಟದ 9-10 ಅಧಿಕಾರಿಗಳ 7 ತಂಡ ರಚಿಸಲಾಗಿದೆ ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು.

ಮರಳು ಸಾಗಾಣಿಕೆ ಮಾಫಿಯಾ ಸಂಪೂರ್ಣ ಮಟ್ಟಹಾಕುವ ಉದ್ದೇಶದಿಂದ ತಾಲ್ಲೂಕುಮಟ್ಟದ ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳು ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿ ಪ್ರತಿ ತಂಡದಲ್ಲಿ ಇರುತ್ತಾರೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸೋಮವಾರ- ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಮಲ್ಲಿಕಾರ್ಜುನ್ ನೇತೃತ್ವದ ತಂಡ (ಮೊಬೈಲ್: 94806-95175). ಮಂಗಳವಾರ- ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ದನಗೌಡ ನೇತೃತ್ವದ ತಂಡ (ಮೊಬೈಲ್: 72599- 20640). ಬುಧವಾರ- ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣ ಅಧಿಕಾರಿ ಎಚ್. ಹುಲಿರಾಜ್ ನೇತೃತ್ವದ ತಂಡ (ಮೊಬೈಲ್: 94808-63120). ಗುರುವಾರ- ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಎಸ್.ಎಂ. ನಾಯಕ್  ತಂಡ (ಮೊಬೈಲ್: 97313-  20739).  

ಶುಕ್ರವಾರ-  ಸಿಡಿಪಿಒ  ರಾಮಲಿಂಗಪ್ಪ ನೇತೃತ್ವದ ತಂಡ (ಮೊಬೈಲ್:  94821-  09487). ಶನಿವಾರ- ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಂತರೆಡ್ಡಿ ನೇತೃತ್ವದ ತಂಡ (ಮೊಬೈಲ್: 98868-50008). ಭಾನುವಾರ-ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ವಜೀರಪ್ಪ ನೇತೃತ್ವದ ತಂಡ (ಮೊಬೈಲ್: 94484- 49392)ಗಳು ಪ್ರತಿದಿನ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಚರಣೆ ವೇಳೆ ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗುವ ಲಾರಿಗೆ ರೂ 10ಸಾವಿರ, ಟ್ರ್ಯಾಕ್ಟರ್‌ಗೆ ರೂ 5 ಸಾವಿರ ದಂಡ ವಿಧಿಸಲಾಗುವುದು ಎಂದರು.

ಸಹಾಯವಾಣಿ: ಕೇಂದ್ರದ ದೂರವಾಣಿ: 08188- 251239. ದ್ವಿತೀಯ ದರ್ಜೆ ಸಹಾಯಕ ಸತೀಶ್, ಆಂಜನೇಯ ಕಾರ್ಯ ನಿರ್ವಹಿಸುವರು. ಸಾರ್ವಜನಿಕರು  ಸೌಲಭ್ಯ ಉಪಯೋಗ ಪಡೆದು ಅಕ್ರಮ ಮರಳುಗಾರಿಕೆ ಬಗ್ಗೆ ದೂರು ನೀಡಬಹುದು ಎಂದು ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.