ADVERTISEMENT

ಯುವಕರು ಕೃಷಿಯಿಂದ ವಿಮುಖ: ಆತಂಕ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:57 IST
Last Updated 14 ಡಿಸೆಂಬರ್ 2013, 5:57 IST

ಮಾಯಕೊಂಡ:   ದೇಶ ಕಟ್ಟಬೇಕಾದ ಯುವಕರು ಕೃಷಿಯಿಂದಲೇ ವಿಮುಖರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್್ ಆತಂಕ ವ್ಯಕ್ತಪಡಿಸಿದರು.

ಮಾಯಕೊಂಡ ಸಮೀಪದ ನಲ್ಕುಂದ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಕೃಷಿ ವಿಚಾರ ಸಂಕಿರಣದಲ್ಲಿ  ಅವರು ಮಾತನಾಡಿದರು.
ಬೆಳಿಗ್ಗೆ ಹೊಲಗಳಿಗೆ ತೆರಳುತ್ತಿದ್ದ  ಯುವ ರೈತರ  ಪಡೆಯ ದೃಶ್ಯ  ಅವರೆಲ್ಲಾ ನಗರಗಳಿಗೆ ತೆರಳಿರುವುದರಿಂದ ಮಾಯವಾಗಿದೆ.

ಯುವಕರೇ  ಕೃಷಿಯನ್ನೇ  ಮರೆತಿರುವುದು ದುರದೃಷ್ಟಕರ.  ಪರಸ್ಪರ ಶ್ರಮ ವಿನಿಮಯ ಮಾಡಿಕೊಂಡು ರೈತರು ಆಳುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ರಾಸಾಯನಿಕಗಳನ್ನೇ ಅವಲಂಬಿಸದೇ  ಸಾವಯವ ಕೃಷಿ ಅನುಸರಿಸಬೇಕು. ಪ್ರಗತಿ ಬಂಧು ಸಂಘಗಳು ನಿಗದಿತ ಅವಧಿಯಲ್ಲಿ ಸಭೆ ಕರೆಯಬೇಕು. ಸದಸ್ಯರು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳದಿದ್ದರೆ ಪ್ರಗತಿ ಸಾಧಿಸಲು ಅಸಾಧ್ಯ. ಕೃಷಿ ಮತ್ತು ಹಾಲು ಉತ್ಪಾದನೆಯಲ್ಲೂ ಈ ವಲಯ ಉತ್ತಮ ಸಾಧನೆ ಮಾಡಿದೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾವಯವ ಕೃಷಿಕ ಈಶ್ವರಪ್ಪ  ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಾ ಉಮೇಶ್ ನಾಯ್ಕ ಮಾತನಾಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಸಂಗಡಿಗರು ಪ್ರಾರ್ಥಿಸಿದರು.  ಕೃಷಿ ವಿಭಾಗದ ಮುಖ್ಯಸ್ಥ ಧರ್ಮರಾಜ್  ಸ್ವಾಗತಿಸಿದರು. ಹೈನುಗಾರಿಕೆ ವಿಭಾಗದ ಮುಖ್ಯಸ್ಥ ವೀರಭದ್ರಪ್ಪ  ನಿರೂಪಪಿಸಿದರು. ಮೇಲ್ವಿಚಾರಕಿ ರೇಖಾ ವಂದಿಸಿದರು.

ಅಣಬೇರು ಗ್ರಾಮ ಪಂಚಾಯ್ತಿ ಸದಸ್ಯರಾದ ಅನಿಲ್ ಕುಮಾರ್, ವೀರಪ್ಪ, ಮುಖಂಡರಾದ ಎಚ್.ಮಹಾಬಲೇಶ್, ರಾಮಪ್ಪ, ಒಕ್ಕೂಟದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಮಹಾಬಲೇಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು, ನಲ್ಕುಂದ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.