ADVERTISEMENT

ರಂಭಾಪುರಿ ಪೀಠ: ಯುಗಮಾನೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 5:28 IST
Last Updated 17 ಮಾರ್ಚ್ 2014, 5:28 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಕ್ಷೇತ್ರನಾಥ ವೀರಭದ್ರನಾಥ ಸ್ವಾಮಿಯ ರಥೋತ್ಸವ ಅಂಗವಾಗಿ ಭಾನುವಾರ ಭದ್ರಾ ನದಿ ತೀರದಲ್ಲಿ ನಡೆದ ಸುರಗೀ ಸಮಾರಾಧನೆ ವೇಳೆ ಜಗದ್ಗುರುಗಳು ಭಕ್ತರಿಗೆ ಸಿಹಿ ಬಡಿಸಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಕ್ಷೇತ್ರನಾಥ ವೀರಭದ್ರನಾಥ ಸ್ವಾಮಿಯ ರಥೋತ್ಸವ ಅಂಗವಾಗಿ ಭಾನುವಾರ ಭದ್ರಾ ನದಿ ತೀರದಲ್ಲಿ ನಡೆದ ಸುರಗೀ ಸಮಾರಾಧನೆ ವೇಳೆ ಜಗದ್ಗುರುಗಳು ಭಕ್ತರಿಗೆ ಸಿಹಿ ಬಡಿಸಿದರು.   

ರಂಭಾಪುರಿ ಪೀಠ (ಬಾಳೆಹೊನ್ನೂರು ): ಇದೇ 12ರಿಂದ ಆರಂಭಗೊಂಡ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರನಾಥ ಸ್ವಾಮಿ ರಥೋತ್ಸ ಕಾರ್ಯಕ್ರಮ ಭಾನುವಾರ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆಯೊಂದಿಗೆ ವೈಭವಯುತವಾಗಿ ತೆರೆಕಂಡಿತು.

ಭಾನುವಾರ ಭದ್ರಾ ನದಿ ತೀರದಲ್ಲಿ ಜಗದ್ಗುರುಗಳು ಸೋಮೇಶ್ವರ ಮಹಾಲಿಂಗ ನಂದೀಶ್ವರಿಗೆ ಪೂಜೆ ಹಾಗೂ ರುದ್ರಾಭಿಷೇಕ ಸಹಿತ ಸಾಮೂಹಿಕ  ಇಷ್ಟಲಿಂಗ ಪೂಜೆಯೊಂದಿಗೆ ಯುಗಮಾನೋತ್ಸಕ್ಕೆ ತೆರೆಬಿತ್ತು.

ನದಿ ತೀರದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನ ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಪಡೆದರು. ಅಲ್ಲಿಯೇ ಭಕ್ತರಿಗೆ  ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಮಠಗಳ ಶಿವಾಚಾರ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.